84 ಲಕ್ಷ 79 ಸಾವಿರ ರೂ ವೆಚ್ಚದಲ್ಲಿ 150 ವ್ಯಾಟ್ ನ 605 ಎಲ್ಇಡಿ ಸ್ಟ್ರೀಟ್ ಲೈಟ್ಸ್ ಅಳವಡಿಕೆಗೆ - ಸಚಿವ ಎನ್ಎಸ್ ಬೋಸರಾಜು
ರಾಯಚೂರು, 27 ಆಗಸ್ಟ್ (ಹಿ.ಸ.) : ಆ್ಯಂಕರ್ : ಸುಂದರ ಮತ್ತು ಸುರಕ್ಷಿತ ನಗರವನ್ನಾಗಿಸಲು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಜನ ಸಂಪರ್ಕವಿರುವ ಮುಖ್ಯ ರಸ್ತೆಗಳಲ್ಲಿ ಬೆಳಕಿನ ವಾತಾವರಣ ನಿರ್ಮಿಸಲು 150 ವ್ಯಾಟ್ ನ 605 ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಮಹಾನಗರ ಪಾಲಿಕೆ ಜಾಗ್ರತೆಯಿಂದ ಲೈಟ
84 ಲಕ್ಷ 79 ಸಾವಿರ ರೂ ವೆಚ್ಚದಲ್ಲಿ 150 ವ್ಯಾಟ್ ನ 605 ಎಲ್ಇಡಿ ಸ್ಟ್ರೀಟ್ ಲೈಟ್ಸ್ ಅಳವಡಿಕೆಗೆ - ಸಚಿವ ಎನ್ಎಸ್ ಬೋಸರಾಜು


ರಾಯಚೂರು, 27 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸುಂದರ ಮತ್ತು ಸುರಕ್ಷಿತ ನಗರವನ್ನಾಗಿಸಲು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಜನ ಸಂಪರ್ಕವಿರುವ ಮುಖ್ಯ ರಸ್ತೆಗಳಲ್ಲಿ ಬೆಳಕಿನ ವಾತಾವರಣ ನಿರ್ಮಿಸಲು 150 ವ್ಯಾಟ್ ನ 605 ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಮಹಾನಗರ ಪಾಲಿಕೆ ಜಾಗ್ರತೆಯಿಂದ ಲೈಟ್ಸ್ ಗಲಕನ್ನು ಮೆಂಟೈನ್ ಮಾಡಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದರು.

ಮಹನಗರ ಪಾಲಿಕೆಯ ಹಳೆಯ ಕಾರ್ಯಾಲಯದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರು ಬೀದಿ ದೀಪಗಳ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದರು.

ಮಹಾನಗರ ಪಾಲಿಕೆಯ 15 ನೇ ಹಣಕಾಸು ಯೋಜನೆಯಡಿ 84 ಲಕ್ಷ 79 ಸಾವಿರ ರೂ ವೆಚ್ಚದಲ್ಲಿ 150 ವ್ಯಾಟ್ ನ 605 ಎಲ್ಇಡಿ ಬೀದಿ ದೀಪಗಳ ಅಳವಡಿಸಲಾಗುತ್ತಿದೆ. ಇನ್ನು ಕೆಲವೆಡೆ ಬೀದಿ ದೀಪಗಳು ಅವಶ್ಯವಿದ್ದರೆ ಅಲ್ಲಿಯೂ ಲೈಟ್ಸ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವ ಮೂಲಕ ನಗರದಲ್ಲಿ ಸ್ವಚ್ಚ, ಸುಂದರ, ಸುರಕ್ಷತೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.

ರಾತ್ರಿ ಸಮಯದಲ್ಲಿ ಭಯದ ವಾತಾವರಣ ಹೋಗಲಾಡಿಸಲು ಎಲ್ಲಾ ರಸ್ತೆಗಳು ಬೆಳಕಾಗಿಸಬೇಕಾಗಿದೆ. ಇದರಿಂದ ಸಾರದವಜನಿಕರು, ವಾಹನ ಚಾಲಕರು, ಪಾದಾಚಾರಿಗಳು ಸುರಕ್ಷಿತವಾಗಿ ಓಡಾಡಬಹುದಾಗಿದೆ ಹಾಗಾಗಿ‌ ಎಲ್ಲಕಡೆ ದೀಪ ಅಳವಡಿಸಲಾಗುತ್ತಿದೆ.

ಈ‌ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾ ಪೌರರಾದ ನರಸಮ್ಮ ನರಸಿಂಹಲು, ಮುಖಂಡರಾದ ಮೊಹ್ಮದ್ ಶಾಲಂ, ಹಿರಿಯರಾದ ಜಯಣ್ಣ,‌ ಕೆ ಶಾಂತಪ್ಪ, ಜಿ ಶಿವಮೂರ್ತಿ,‌ ಅಮರೇಗೌಡ ಹಂಚಿನಾಳ, ನರಸಿಂಹಲು ಮಾಡಗಿರಿ, ಬಸವರಾಜ ರಡ್ಡಿ, ಜಯಂತರಾವ್ ಪತಂಗೆ, ರುದ್ರಪ್ಪ ಅಂಗಡಿ, ಬಸವರಾಜ ಪಾಟೀಲ್, ಸತೀಶ, ಜಿಂದಪ್ಪ, ಹರಿ ಬಾಬು, ತಿಮ್ಮಪ್ಪ, ಭೀಮರಾಯ ,‌ಸಣ್ಣ ನರಸರಡ್ಡಿ, ಗೋವಿಂದರಡ್ಡಿ, ಹನುಮಂತ ಹೊಸೂರು ಸೇರಿ ಅನೇಕರಿದ್ದರು‌.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande