ಉಚಿತ ವೃತ್ತಿ ತರಬೇತಿಗಳು ಆರಂಭ
ಗದಗ, 27 ಆಗಸ್ಟ್ (ಹಿ.ಸ.) : ಆ್ಯಂಕರ್ : ಎಸ್.ಬಿ.ಆಯ್-ಎ,ಎಸ್,ಎಫ್‌ಆರ್‌ಸೆಟಿ ಹುಲಕೋಟಿ ಗದಗ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಹುಲಕೋಟಿ ಗದಗ ಸಂಸ್ಥೆಯಲ್ಲಿ ಗ್ರಾಮೀಣ ಭಾಗದ ನಿರುದ್ಯೋಗಿಯುವಕ/ಯುವತಿಯರಿಗೆ ಸುಮಾರು 20 ವರ್ಷಗಳಿಂದ ವಿವಿಧ ರೀತಿ ಸ್ವಯಂ ಉದ್ಯೋಗ ತರಬೇತಿಯನ್ನು ನೀಡುತ್ತಾ ಬಂದಿದೆ ಮತ್ತು
ಫೋಟೋ


ಗದಗ, 27 ಆಗಸ್ಟ್ (ಹಿ.ಸ.) :

ಆ್ಯಂಕರ್ : ಎಸ್.ಬಿ.ಆಯ್-ಎ,ಎಸ್,ಎಫ್‌ಆರ್‌ಸೆಟಿ ಹುಲಕೋಟಿ ಗದಗ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಹುಲಕೋಟಿ ಗದಗ ಸಂಸ್ಥೆಯಲ್ಲಿ ಗ್ರಾಮೀಣ ಭಾಗದ ನಿರುದ್ಯೋಗಿಯುವಕ/ಯುವತಿಯರಿಗೆ ಸುಮಾರು 20 ವರ್ಷಗಳಿಂದ ವಿವಿಧ ರೀತಿ ಸ್ವಯಂ ಉದ್ಯೋಗ ತರಬೇತಿಯನ್ನು ನೀಡುತ್ತಾ ಬಂದಿದೆ ಮತ್ತು ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ 70% ತಮ್ಮ ಉದ್ಯೋಗವನ್ನು ಕೈಗೊಂಡಿದ್ದಾರೆ.

ಅಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಿನಲ್ಲಿ ಕುರಿ ಸಾಕಾಣಿಕೆ, ಅಣಬೆ ತಯಾರಿಕೆ, ಕಂಪ್ಯೂಟರ್ ಟ್ಯಾಲಿ, ಕಂಪ್ಯೂಟರ್ ಡಿ.ಟಿ.ಪಿ, ದ್ವಿ ಚಕ್ರ ವಾಹನ ರಿಪೇರಿ, ಪೋಟೊಗ್ರಾಪಿ ವಿಡಿಯೋಗ್ರಾಫಿ, ಮಹಿಳೆಯರ ಹೊಲಿಗೆ ತರಬೇತಿ. ಉಚಿತ ತರಬೇತಿಗಳು ಆರಂಭವಾಗುತ್ತವೆ.

ಆಸಕ್ತ 18-44 ರ ವಯಸ್ಸಿನೊಳಗಿನ ಗಂಡು ಅಥವಾ ಹೆಣ್ಣು ಗ್ರಾಮೀಣ ಪ್ರದೇಶದ ಬಿ.ಪಿ.ಎಲ್, ಆದ್ಯತಾ ಕುಟುಂಬ, ಪಿ,ಎಚ್,ಎಚ್, ಅಥವಾ ನರೇಗಾ ಜಾಬ್ ಕಾರ್ಡ ಹೊಂದಿರುವವರು ಈ ತರಬೇತಿಗಳನ್ನು ಪಡೆದುಕೊಳ್ಳಬಹುದು.

ತರಬೇತಿಗಳಲ್ಲಿ ಉಚಿತ ಊಟ ಮತ್ತು ವಸತಿ ಇರುತ್ತದೆ. ತರಬೇತಿ ಪಡೆದವರಿಗೆ ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಸಾಲಕ್ಕೆ ಸಹಾಯ ಮಾಡಿಕೊಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಛೇರಿ ವಿಳಾಸ ಎಸ್.ಬಿ.ಆಯ್-ಎ,ಎಸ್,ಎಫ್‌ಆರ್‌ಸೆಟಿ ಹುಲಕೋಟಿ ಗದಗ ಕೆ.ವಿ.ಕೆ ಆವರಣ ಹುಲಕೋಟಿ. ಜಿ.ಗದಗ. ಮೊ. 8880169996, 9632287949 ಇಲ್ಲಿ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande