ಗದಗ, 27 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಜೀವನೊಪಾಯ ರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರದ ನಿಯಂತ್ರಣ ನಿಯಮಗಳು, 2016 ರ ಅಡಿಯಲ್ಲಿ ಕುಂದುಕೊರತೆ ಪರಿಹಾರ ಸಮಿತಿಯನ್ನು ರಚಿಸಲು ಹುದ್ದೆಯಂತೆ ಅರ್ಜಿ ಆಹ್ವಾನಿಸಲಾಗಿದೆ.
ಮೇಲಿನ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಮಾನದಂಡಗಳು ಈ ಕೆಳಗಿನಂತಿವೆ.
ಅಧ್ಯಕ್ಷರು ನಿವೃತ್ತ ಸಿವಿಲ್ ನ್ಯಾಯಾದೀಶರಾಗಿರಬೇಕು. (65 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು) ಸ್ಥಳೀಯ ಸದಸ್ಯರು.ರಾಜ್ಯ ಸರ್ಕಾರದ ನಿವೃತ್ತ ವರ್ಗ-1 ಅಧಿಕಾರಿಯಾಗಿರಬೇಕು.(65ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು) ಸ್ಥಳೀಯ ಪ್ರದೇಶದಲ್ಲಿ ನಿಷ್ಪಾಪ ಸೇವಾ ದಾಖಲೆಯನ್ನು ಹೊಂದಿರಬೇಕು. ಪ್ರಸ್ತಾವಿತ ಸಮಿತಿಯ ಅವಧಿಯು ಬಿಡುಗಡೆಯಾದ ದಿನಾಂಕದಿಂದ ಐದು ವರ್ಷಗಳವರೆಗೆ ಚಲಾವಣೆಯಲ್ಲಿರುತ್ತದೆ. ಸಮಿತಿಯ ಕಾರ್ಯಾಚರಣೆಯ ಅಧಿಕಾರ ವ್ಯಾಪ್ತಿಯನ್ನು ಕಾಲ ಕಾ¯ಕ್ಕೆ ಸರ್ಕಾರವು ಸೂಚಿಸುತ್ತದೆ.
ಕಮಿಟಿ ಸದಸ್ಯರ ಗೌರವಧನ ನಿವೃತ್ತ ಸಿವಿಲ್ ನ್ಯಾಯದೀಶರು ಅಥವಾ ಮ್ಯಾಜಿಸ್ಟೆçÃಟ್ ಅರೆಕಾಲಿಕ ಆಧಾರದ ಮೇಲೆ ನೇಮಕಗೊಂಡರೆ ದಿನಕ್ಕೆ (ಒಂದು ಸಭೆಗೆ) ಎರಡು ಸಾವರಿದ ಐದನೂರು ರೂಪಾಯಿ ಗೌರವಧನ ಪಡೆಯುತ್ತಾರೆ. ಕುಂದುಕೊರತೆ ಪರಿಹಾರ ಸಮಿತಿಯ ಇತರೆ ಸದಸ್ಯರು ಅರೆಕಾಲಿಕ ನೇಮಕಗೊಂಡರೆ ದಿನಕ್ಕೆ (ಒಂದು ಸಭೆಗೆ) ಒಂದು ಸಾವಿರ ರೂಪಾಯಿ ಗೌರವಧನ ಪಡೆಯುತ್ತಾರೆ.
ಕುಂದು ಕೊರತೆ ಪರಿಹಾರ ಸಮಿತಿಯ ಕೆಲಸದ ದಿನಗಳು ಮತ್ತು ಕಛೇರಿಯ ಸಮಯಗಳು ಸರ್ಕಾರ ನಿಗಧಿಪಡಿಸಿದಂತೆ ಇರುತ್ತದೆ. ಅರ್ಜಿಗಳನ್ನು ಪ್ರಕಟಗೊಂಡ 30 ದಿನಗಳ ಒಳಗಾಗಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯತ ನರೇಗಲ್ಲ ಇವರ ಕಾರ್ಯಾಲಯದ ಡೇ-ನಲ್ಮ ವಿಭಾಗದಲ್ಲಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತ ನರೇಗಲ್ಲ ಡೇ ನಲ್ಮ ವಿಭಾಗದಲ್ಲಿ ಕೇಳಿ ಪಡೆಯಬಹುದಾಗಿದೆ. ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ ನರೇಗಲ್ಲ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / lalita MP