ಸ್ಮಶಾನ ಮರು ಸರ್ವೇ ; ಯಥಾಸ್ಥಿತಿ ಕಾಪಾಡಲು ಪಿಎಸೈ ಗುರುರಾಜ್ ಆದೇಶ
ಸ್ಮಶಾನ ಮರು ಸರ್ವೇ ಮಾಡುವವರೆ ಯಥಾಸ್ಥಿತಿ ಕಾಪಾಡಲು ಪಿಎಸೈ ಗುರುರಾಜ್ ಆದೇಶ
ಸ್ಮಶಾನ ಮರು ಸರ್ವೇ ; ಯಥಾಸ್ಥಿತಿ ಕಾಪಾಡಲು ಪಿಎಸೈ ಗುರುರಾಜ್ ಆದೇಶ


ಕೋಲಾರ, ೨೬ ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಾರ್ವಜನಿಕರ ಸ್ಮಶಾನ ಒತ್ತುವರಿ ಪ್ರಶ್ನಿಸಿದ ಗ್ರಾಮ ಪಂಚಾಯಿತಿ ಸದಸ್ಯ ಬೊಮ್ಮಾಂಡಹಳ್ಳಿ ಸುಭ್ರಮಣಿ ಮೇಲೆ ನಿವೃತ್ತ ಪೊಲೀಸ್ ಅಧಿಕಾರಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿ ಮುನಿವೆಂಕಟಸ್ವಾಮಿ ಹಾಗೂ ಪಿಎಸೈ ಗುರುರಾಜ್ ನೇತೃತ್ವದಲ್ಲಿ ಸ್ಮಶಾನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಮರು ಸರ್ವೇ ಮಾಡುವವರೆ ಯಥಾಸ್ಥಿತಿ ಕಾಪಾಡುವಂತೆ ಒತ್ತುವರಿಗೆ ಯತ್ನಿಸಿದ ಮುನಿಯಪ್ಪ ಹಾಗೂ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಕೆಜಿಫ್ ಸಮೀಪದ ಬೇತಮಂಗಲ ಬಳಿಯ ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಬಳಿಯ ಬೊಮ್ಮಾಂಡಹಳ್ಳಿಯ ಸರ್ವೇ ನಂಬರ್ ೬೩ರಲ್ಲಿ ಸ್ಮಶಾನಕ್ಕೆ ೩೦ ಗುಂಟೆ ಜಮೀನು ಮಂಜೂರಾಗಿ ಹದ್ದು ಬಸ್ತು ಗುರುತಿಸಿ ಟ್ರಂಚ್ ತೆಗೆದಿದ್ದರೂ, ಪೊಲೀಸ್ ಅಧಿಕಾರಿ ಏಕಾಏಕಿ ಟ್ರಂಚ್ ಮುಚ್ಚಿ ದೌರ್ಜನ್ಯ ಮಾಡಿದ್ದಾರೆಂದು ಬೇತಮಂಗಲ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿ ಮುನಿವೆಂಕಟಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ, ಪಿಎಸೈ ಗುರುರಾಜ್ ನೇತೃತ್ವದಲ್ಲಿ ಸ್ಮಶಾನ ಸ್ಥಳಕ್ಕೆ ಭೇಟಿ ನೀಡಿ ಎರಡೂ ಕಡೆಯ ದಾಖಲೆ ಪರಿಶೀಲನೆ ನಡೆಸಿದರು.

ನಿವೃತ್ತ ಪೋಲೀಸ್ ಅಧಿಕಾರಿ ಮುನಿಯಪ್ಪ ಮಾತನಾಡಿ ೨೦೦೨ ರಲ್ಲಿ ನಾನು ಜಮೀನು ಖರೀದಿಸಿದ್ದೇನೆ. ಆದರೆ ಇಲ್ಲಿ ಕೆಲವು ಸಮಾಧಿಗಳು ಇದ್ದವು ಆದರೆ ಯಾವುದೇ ದಾಖಲೆ ಇರಲಿಲ್ಲ ಏಕಾಏಕಿ ಸ್ಮಶಾನ ಸ್ಥಳಕ್ಕೆ ಮಂಜೂರಾಗಿದ್ದು ನಮಗೆ ಗೊತ್ತಿಲ್ಲ ಈ ಬಗ್ಗೆ ಪೂರ್ವದ ದಾಖಲೆ ಪರಿಶೀಲನೆ ಮಾಡಬೇಕಿದೆ ಎಂದರು.

ಆದರೆ ಸ್ಮಶಾನಕ್ಕೆ ಜಮೀನು ಮಂಜೂರಾಗಿ ೪ ವರ್ಷಗಳಾಗಿದ್ದು, ಬೇರೆ ಕಡೆ ಸಹ ಸರ್ಕಾರಿ ಗೋಮಾಳವಿದೆ ಬೇರೆ ಕಡೆ ಅವಕಾಶ ಕಲ್ಪಿಸಿ ಎಂದ ಮುನಿಯಪ್ಪ ವಾದ ಮಾಡಿದರು.

ಪಿಎಸೈ ಗುರುರಾಜ್ ಮಾತನಾಡಿ ಇದು ಸ್ಮಶಾನಕ್ಕೆ ಜಮೀನು ಮಂಜೂರಾಗಿದೆ. ನಿಮ್ಮ ಜಮೀನಿದ್ದರೆ ಸರ್ವೇ ನಡೆಸಿ ಹದ್ದು ಬಸ್ತು ಗುರುತಿಸಿಕೊಳ್ಳಿ ಸಮಯಾವಕಾಶ ನೀಡುತ್ತೇನೆ ಆದರೆ ಸದರಿ ಸ್ಮಶಾನದ ಜಾಗದಲ್ಲಿ ಯಾವುದೇ ಪ್ರಕ್ರಿಯೆ ನಡೆಯಬಾರದು ನಡೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬೊಮ್ಮಾಂಡಹಳ್ಳಿ ಸುಭ್ರಮಣಿ, ದಲಿತ ಮುಖಂಡ ಪಿಚ್ಚಳ್ಳಿ ಮಂಜುನಾಥ್, ಕೆಂಚಪ್ಪ, ಅನೇಕ ಗ್ರಾಮಸ್ಥರು, ಮಹಿಳೆಯರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande