ಬಳ್ಳಾರಿ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಎ.ಎಸ್ ಅಧಿಕಾರಿ ಪಿ.ಎಸ್. ಮಂಜುನಾಥ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
ಹಾಲಿ ಆಯುಕ್ತರಾಗಿದ್ದ ಖಲೀಲ್ ಸಾಬ್ ಅವರು ವರ್ಗಾವಣೆ ಆಗಿದ್ದು, ಈ ಹುದ್ದೆಗೆ ವರ್ಗವಾಗಿದ್ದ ಮಹಿಳಾ ಅಧಿಕಾರಿಗೆ ಅಧಿಕಾರ ಸ್ವೀಕರಿಸಲು ಅವಕಾಶ ಸಿಕ್ಕಿರಲಿಲ್ಲ.
ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳಾಗಿ ಮತ್ತು ಖನಿಜ ಪ್ರತಿಷ್ಠಾನದ ಅಧಿಕಾರಿಗಳಾಗಿ ಪಿ.ಎಸ್. ಮಂಜುನಾಥ್ ಅವರು ಸೇವೆ ಸಲ್ಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್