ಸಿರವಾರ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸಿರವಾರ ಪಟ್ಟಣದ ದೇವದುರ್ಗ ಕ್ರಾಸ್ ನ ಕೆಆರ್ ಐಡಿಎಲ್ ನ ರಸ್ತೆ ಕಾಮಗಾರಿ, ಪಿಡ್ಬ್ಲೂ ಡಿಯ ಸಿರವಾರ ಪಟ್ಟಣದ ರಾಜ್ಯ ಹೆದ್ದಾರಿ, ಕೆಕೆ ಆರ್ ಡಿಬಿಯ ರಸ್ತೆ ಕಾಮಗಾರಿಗಳು ಹಾಗೂ ಸಿರವಾರ ಪಟ್ಟಣದ ಕ್ರೀಡಾಂಗಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕಾಮಗಾರಿ ಮಾಡಬೇಕು ಇಲ್ಲದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಬ್ಲ್ಯೂಡಿಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ ಸೇರಿ ಸಂಬಂದ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದರು.
ಸಿರವಾರ ತಾಲೂಕ ಕಾಮಗಾರಿಗಳ ಕುರಿತು ಸಚಿವ ಎನ್. ಎಸ್. ಬೋಸರಾಜು, ಶಾಸಕ ಹಂಪಯ್ಯ ನಾಯಕ ಅವರು ಮಾಹಿತಿ ಪಡೆದು ಕಮಗಾರಿ ಪ್ರಾರಂಭದ ಬಗ್ಗೆ ವಿಳಂಬ ಮಾಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಿರವಾರದ ಮಾನ್ವಿ ಕ್ರಾಸ್ ಸೇರಿ ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಮಳೆಯಿಂದ ನೀರು ನಿಂತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ತಗ್ಗು- ದಿಮ್ಮಿಗಳಿಂದ ಅಪಘಾತವಾಗುತ್ತಿವೆ ಕಾರಣ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಅನೂಕೂಲ ಕಲ್ಪಿಸಬೇಕೆಂದು ತಿಳಿಸಿದರು.
ಸಿರವಾರ ತಾಲೂಕಿನ ಬಹುದಿನಗಳ ಬೇಡಿಕೆಯಾಗಿದ್ದ ಸಿರವಾರ ತಾಲೂಕ ಕ್ರೀಡಾಂಗಣ ಕಾಮಗಾರಿಯನ್ನು ಸಹ ಬೇಗ-ಬೇಗ ಮುಗಿಸಿ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕಾಗಿದೆ. ಅಧಿಕಾರಿಗಳು ಕಾಮಗಾರಿಗಳನ್ನು ತ್ವರಿತವಾಗಿ ಗುಣಮಟ್ಟದೊಂದಿಗೆ ಮುಂದೆ ನಿಂತು ಮಾಡಿಸಬೇಕು ಎಂದು ಸೂಚನೆ ನೀಡಿದರು.
ಸಿರವಾರ ಪಟ್ಟಣದ ದೇವದುರ್ಗ ಕ್ರಾಸ್ ನ ರಸ್ತೆಯನ್ನು ವೀಕ್ಷಿಸಿ, ಕಾಮಗಾರಿ ಪ್ರಾರಂಭಿಸದ ಅಧಿಕಾರಿಗಳು ಹಾಗೂ ಗುತ್ತೆದಾರರಿಗೆ ತರಾಟೆಗೆ ತೆಗೆದುಕೊಂಡು, ಕಾಮಗಾರಿ ಪ್ರಾರಂಭಿಸಲು ಏಕ ವಿಳಂಬ ಮಾಡಿದ್ದೀರಿ, ಜನರು ಓಡಾಡು ತೊಂದರೆಯಾಗುತ್ತಿದೆ ನಿಮಗೆ ಗೊತ್ತಾಗುವುದಿಲ್ಲವೆ....? ಎಂದು ಪ್ರಶ್ನಿಸಿ ಇನ್ನೆರಡು ದಿನದಲ್ಲಿ ಕಾಮಗಾರಿ ಪ್ರಾರಂಭಿಸಿ ಈ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಅಶೋಕ ಪವಾರ್, ಪಿಡಬ್ಲ್ಯೂಡಿ ನ ಶಾಮಲಪ್ಪ, ನೀರಾವರಿ ಇಲಾಖೆಯ ಎಇಇ ವಿಜಯ ಲಕ್ಷ್ಮೀ, ಕಾಂಗ್ರೆಸ್ ಮುಖಂಡರಾದ ಕೆ ಶಾಂತಪ್ಪ, ಬಲ್ಲಟಗಿ ಅಮರೇಶಪ್ಪ, ಯುವ ಮುಖಂಡರಾದ ಬ್ರಿಜೇಶ್ ಪಾಟೀಲ್, ಕಿರಲಿಂಗಪ್ಪ, ಶಿವಮೂರ್ತಿ, ರುದ್ರಪ್ಪ ಅಂಗಡಿ, ಶಿವು ಅರಕೇರಿ, ಅಮರೇಗೌಡ ಹಂಚಿನಾಳ,ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಭೂಪನಗೌಡ ಪಾಟೀಲ್, ಶಿವಾನಂದ ಚುಕ್ಕಿ, ಬಸವರಾಜ ಪಾಟೀಲ್, ಮಾಜಿ ತಾಪಂ ಅದ್ಯಕ್ಷರಾದ ದಾನಗೌಡ, ರಮೇಶ ದರ್ಶನಕರ್, ನಾಗಪ್ಪ ನವಲಕಲ್, ಸೇರಿದಂತೆ ಅನೇಕರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್