ಲೇಖಕಿ ಬಾನು ವಿರುದ್ಧ ಯತ್ನಾಳ ವಾಗ್ದಾಳಿ
ವಿಜಯಪುರ, 26 ಆಗಸ್ಟ್ (ಹಿ.ಸ.) : ಆ್ಯಂಕರ್ : ಲೇಖಕಿ ಬಾನು ಅಪಮಾನ ಲೇಖಕಿ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಬಾನು ಕನ್ನಡ ಬಾವುಟ ಹಾಗೂ ಕನ್ನಡ ಭುವನೇಶ್ವರಿ ಬಗ್ಗೆ ಅಪಮಾನ ಮಾಡಿದ್ದಾರೆ.‌ ಅಲ್ಲದೇ, ಹಿಂದೂ ಪೂಜೆ, ಹೂವು ಹಾಕುವ ನೈತಿಕ ಹಕ್ಕು ಬಾನು ಅವರಿಗೆ ಇಲ್ಲ.‌ ನಮ್ಮ ಮೂ
ಯತ್ನಾಳ


ವಿಜಯಪುರ, 26 ಆಗಸ್ಟ್ (ಹಿ.ಸ.) :

ಆ್ಯಂಕರ್ : ಲೇಖಕಿ ಬಾನು ಅಪಮಾನ ಲೇಖಕಿ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಬಾನು ಕನ್ನಡ ಬಾವುಟ ಹಾಗೂ ಕನ್ನಡ ಭುವನೇಶ್ವರಿ ಬಗ್ಗೆ ಅಪಮಾನ ಮಾಡಿದ್ದಾರೆ.‌ ಅಲ್ಲದೇ, ಹಿಂದೂ ಪೂಜೆ, ಹೂವು ಹಾಕುವ ನೈತಿಕ ಹಕ್ಕು ಬಾನು ಅವರಿಗೆ ಇಲ್ಲ.‌ ನಮ್ಮ ಮೂರ್ತಿ ಪೂಜೆ ವಿರೋಧ ಮಾಡಿದವರು ಅವರು ಎಂದು ವಾಗ್ದಾಳಿ ನಡೆಸಿದರು.

ಬಾನು ಅವರು ಕನ್ನಡಿಗರು ಅಲ್ಲ, ನಮ್ಮ ಧರ್ಮಕ್ಕೆ ಸಂಬಂಧ ಇಲ್ಲ.‌ ಇಸ್ಲಾಂ ಧರ್ಮದ ಬಗ್ಗೆ ಗೌರವ ಇದ್ರೇ ಬಾನು ಅವರೇ ಬಿಟ್ಟುಕೊಡಬೇಕು.‌ ಇಲ್ಲದೇ ಹೋದ್ರೇ ಚಾಮುಂಡೇಶ್ವರಿ ಬಗ್ಗೆ ಗೌರವ, ಪೂಜೆ ಮಾಡುತ್ತೇನೆ ಎಂದು ಹೇಳಿ ಪೂಜೆ ಮಾಡಬೇಕು ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande