ಬಲೂಚ್ ಯುವಕರು ನಾಪತ್ತೆ : ಪಾಕಿಸ್ತಾನಿ ಪಡೆಗಳ ವಿರುದ್ಧ ಆರೋಪ
ಇಸ್ಲಾಮಾಬಾದ್, 26 ಆಗಸ್ಟ್ (ಹಿ.ಸ.) : ಆ್ಯಂಕರ್ : ಕರಾಚಿ ಹಾಗೂ ಬಲೂಚಿಸ್ತಾನದ ಕೆಚ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಮೂವರು ಬಲೂಚ್ ಯುವಕರನ್ನು ಕರೆದೊಯ್ದಿರುವ ವರದಿ ಬಂದಿದೆ. ಆಗಸ್ಟ್ 24ರಂದು ಕರಾಚಿಯ ಮಾಲಿರ್ ಪ್ರದೇಶದಿಂದ ಕರೀಮ್ ಮತ್ತು ಶೋಯೆಬ್ ಅಹ್ಮದ್ ಅವರನ್ನು ಪಡೆಗಳು ಕರೆದುಕೊಂಡು
Baloich


ಇಸ್ಲಾಮಾಬಾದ್, 26 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕರಾಚಿ ಹಾಗೂ ಬಲೂಚಿಸ್ತಾನದ ಕೆಚ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳು ಮೂವರು ಬಲೂಚ್ ಯುವಕರನ್ನು ಕರೆದೊಯ್ದಿರುವ ವರದಿ ಬಂದಿದೆ.

ಆಗಸ್ಟ್ 24ರಂದು ಕರಾಚಿಯ ಮಾಲಿರ್ ಪ್ರದೇಶದಿಂದ ಕರೀಮ್ ಮತ್ತು ಶೋಯೆಬ್ ಅಹ್ಮದ್ ಅವರನ್ನು ಪಡೆಗಳು ಕರೆದುಕೊಂಡು ಹೋದರೆಂದು ಕುಟುಂಬಗಳು ಆರೋಪಿಸಿವೆ.

ಇದೇ ದಿನ ಉಸ್ಮಾನ್ ಮಕ್ಬೂಲ್ ಎಂಬ ಯುವಕನನ್ನೂ ಕರೆದೊಯ್ದಿದ್ದಾರೆ. ಉಸ್ಮಾನ್ ಅವರನ್ನು 2019ರಲ್ಲಿ ಸಹ ಸೇನಾ ಸಿಬ್ಬಂದಿ ಬಂಧಿಸಿ, 2021ರಲ್ಲಿ ಬಿಡುಗಡೆ ಮಾಡಿತ್ತು.

ಇನ್ನೊಂದೆಡೆ, ಗ್ವಾದರ್ ಜಿಲ್ಲೆಯ ಕುಲ್ಡಾನ್ ಮತ್ತು ಗುಂಬಾದ್ ಪ್ರದೇಶಗಳಲ್ಲಿ ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಐವರನ್ನು ಬಂಧಿಸಲಾಗಿದೆ. ಇವರಲ್ಲಿ ಮೂವರ ಗುರುತು ಸಿರಾಜ್ , ವಾಸಿಮ್ ಮತ್ತು ವಹೀದ್ ಎಂದು ಪತ್ತೆಯಾಗಿದೆ. ಉಳಿದ ಇಬ್ಬರ ಗುರುತು ಇನ್ನೂ ಸ್ಪಷ್ಟವಾಗಿಲ್ಲ.

ಈಗಾಗಲೇ ಆಗಸ್ಟ್ 23ರಂದು ಮಾಲಿರ್‌ನ ಸಾದಿಕ್ ಗ್ರಾಮದಲ್ಲಿ 26 ವರ್ಷದ ಸಾದಿಕ್ ಮುರಾದ್ ಅವರನ್ನು ಪಡೆಗಳು ಕರೆದೊಯ್ದಿದ್ದರು. ಕುಟುಂಬ ಸದಸ್ಯರು ಕರಾಚಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಮಾನವ ಹಕ್ಕು ಸಂಘಟನೆಗಳು ಪಾಕಿಸ್ತಾನಿ ಪಡೆಗಳು ಬಲೂಚಿಸ್ತಾನದಲ್ಲಿ ನಿರಂತರವಾಗಿ ಇಂತಹ ನಾಪತ್ತೆ ಪ್ರಕರಣಗಳಿಗೆ ಕಾರಣವೆಂದು ಆರೋಪಿಸುತ್ತಿವೆ. ಆದರೆ ಫೆಡರಲ್ ಅಧಿಕಾರಿಗಳು ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande