ಮಾನ್ವಿ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿರವಾರ ತಾಲೂಕಿನ ಮಲ್ಲಟ್ಟ ಗ್ರಾಮದಲ್ಲಿ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿಯ 17.50 ಲಕ್ಷ ರೂನ ಹೆಚ್ಚುವರಿ ಶಾಲಾ ಕೊಠಡಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಹಾಗೂ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಭೂಮಿ ಪೂಜೆ ನೆರವೇರಿಸಿದರು.
ಗ್ರಾಮೀಣ ಭಾಗದ ಶೈಕ್ಷಣಿಕ ಬಲವರ್ಧನೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹೆಚ್ಚಿನ ಅನುದಾನವನ್ನು ನೀಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶರಣಯ್ಯ ನಾಯಕ, ಕೆ ಶಾಂತಪ್ಪ, ಬಲ್ಲಟಗಿ ಅಮರೇಶಪ್ಪ, ಕಿರಲಿಂಗಪ್ಪ, ಶಿವಮೂರ್ತಿ, ಮಲ್ಲಟ ಮಲ್ಲಿಕಾರ್ಜುನ, ರುದ್ರಪ್ಪ ಅಂಗಡಿ, ದೇವೆಂದ್ರಪ್ಪ ಬೊಮ್ಮನಾಳ, ಶಿವು ಅರಕೇರಿ, ಅಮರೇಗೌಡ ಹಂಚಿನಾಳ, ಬಸವರಾಜ ಪಾಟೀಲ್ ನಾಗಪ್ಪ ನವಲಕಲ್ ಸೇರಿದಂತೆ ಅನೇಕರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್