ಹೊಸಪೇಟೆ, 26 ಆಗಸ್ಟ್ (ಹಿ.ಸ.) :
ಆ್ಯಂಕರ್ : 2025ನೇ ಸಾಲಿನ ಶ್ರೀಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ನಿಮಿತ್ತ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಹರಪನಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ, ಮದ್ಯ ಸಾಗಾಣಿಕೆ ಹಾಗೂ ಬಾರ್, ರೆಸ್ಟೋರೆಂಟ್ ಮತ್ತು ಇತರೆ ಸ್ಥಳಗಳಲ್ಲಿ ಮದ್ಯ ಮಾರಾಟ ಮಾಡದಂತೆ ನಿμÉೀಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ ಹರಪನಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ 1ನೇ ದಿನ ಆ.27 ರಂದು ಬೆ.6 ಗಂಟೆಯಿಂದ ಆ.28 ರ ಬೆ.6 ಗಂಟೆಯವರೆಗೆ, 3 ನೇ ದಿನ ಆ.29 ರಂದು ಬೆ.6 ರಿಂದ ಆ.30 ರಂದು ಬೆ.6 ರವರೆಗೆ, 5ನೇ ದಿನ ಆ.31 ರಿಂದ ಬೆ.6 ರಿಂದ ಸೆ.1 ರವರೆಗೆ, 7ನೇ ದಿನ ಸೆ.2 ರಂದು ಬೆ.6 ರಿಂದ ಸೆ.3 ರಂದು ಬೆ.6 ರವರೆಗೆ, 9ನೇ ದಿನ ಸೆ.4 ರಂದು ಬೆ.6 ರಂದು ಸೆ.5 ರಂದು ಬೆ.6 ರವರೆಗೆ, 11 ನೇ ದಿನ ಹರಪನಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಸೆ.6 ರಂದು ಬೆ.6 ರಿಂದ ಸೆ.7 ರಂದು ಬೆ.6 ರವರೆಗೆ, 13ನೇ ದಿನ ಹಡಗಲಿ ಪಟ್ಟಣ ವ್ಯಾಪ್ತಿಯಲ್ಲಿ ಸೆ.8 ರಂದು ಬೆ.6 ರಿಂದ ಸೆ.9 ರಂದು ಬೆ.6 ರವರೆಗೆ,
ಕೂಡ್ಲಿಗಿ ಉಪವಿಭಾಗ ವ್ಯಾಪ್ತಿಯಲ್ಲಿ 1 ಮತ್ತು 2ನೇ ದಿನ ಆ.26 ರಂದು ಸಂಜೆ 6 ರಿಂದ ಆ.28 ರಂದು ಬೆ.6 ಗಂಟೆಯವರೆಗೆ, 3ನೇ ದಿನ ಆ.28 ರಂದು ಸಂಜೆ 6 ರಿಂದ ಆ.30 ರವರೆಗೆ ಬೆ.6 ಗಂಟೆಯವರೆಗೆ, 7 ನೇ ದಿನ ಹಗರಿಬೊಮ್ಮನಹಳ್ಳಿ ಮತ್ತು ಮರಿಯಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸೆ.1 ರಂದು ಸಂಜೆ.6 ರಿಂದ ಸೆ.3 ರವರೆಗೆ ಬೆ.6 ಗಂಟೆಯವರೆಗೆ, 9ನೇ ದಿನ ಹಗರಿಬೊಮ್ಮನಹಳ್ಳಿ, ಎಂ.ಎಂ.ಹಳ್ಳಿ ಠಾಣಾ ವ್ಯಾಪ್ತಿ ಸೆ.3 ರಂದು ಸಂಜೆ.6 ಗಂಟೆಯಿಂದ ಸೆ.5 ರಂದು ಬೆ.6 ಗಂಟೆಯವರೆಗೆ, 11 ನೇ ದಿನ ಹಗರಿಬೊಮ್ಮನಹಳ್ಳಿ ತಾಲೂಕು ವ್ಯಾಪ್ತಿ ಸೆ.5 ರಂದು ಸಂಜೆ 6 ಗಂಟೆಯಿಂದ ಸೆ.7 ರಂದು ಬೆ.6 ಗಂಟೆವರೆಗೆ.
ಹೊಸಪೇಟೆ ಉಪವಿಭಾಗ ವ್ಯಾಪ್ತಿಯಲ್ಲಿ 3 ನೇ ದಿನ ಆ.29 ರಂದು ಬೆ.6 ರಿಂದ ಸೆ.30 ರಂದು ಬೆ.6 ರವರೆಗೆ, 5 ನೇ ದಿನ ಆ.31 ರಂದು ಬೆ.6 ಗಂಟೆಯಿಂದ ಸೆ.1 ರಂದು ಬೆ.6 ಗಂಟೆಯವರೆಗೆ, 11 ನೇ ದಿನ ಹೊಸಪೇಟೆ ನಗರ ವ್ಯಾಪ್ತಿ ಸೆ.6 ರಂದು ಬೆ.6 ರಿಂದ ಸೆ.7 ರಂದು ಬೆ.6 ಗಂಟೆಯವರೆಗೆ.
ಹೊಸಪೇಟೆ ಉಪವಿಭಾಗ ವ್ಯಾಪ್ತಿಯಲ್ಲಿ ಈದ್ ಮಿಲಾದ್ ನಿಮಿತ್ತ ಸೆ.5 ರಂದು ಬೆ.6 ರಿಂದ ಸೆ.6 ರಂದು ಬೆ.6 ರವರೆಗೆ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಈ ಆದೇಶವನ್ನು ಅನುಷ್ಠಾನಕ್ಕೆ ತರಲು ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಅಬಕಾರಿ ಉಪಆಯುಕ್ತರು ಜರುಗಿಸಬೇಕೆಂದು ಆದೇಶಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್