ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಶುಲ್ಕ ಪರಿಷ್ಕರಣೆ
ರಾಯಚೂರು, 26 ಆಗಸ್ಟ್ (ಹಿ.ಸ.) : ಆ್ಯಂಕರ್ : ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ 2025-26ನೇ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಪ್ರಥಮ ವರ್ಷ ಡಿಪ್ಲೋಮಾ ಕೋರ್ಸುಗಳು ಹಾಗೂ ಲ್ಯಾಟರಲ್ ಎಂಟ್ರಿ ದ್ವಿತೀಯ ವರ್ಷಕ್ಕೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಬೋಧನಾ ಶುಲ್ಕ ಹಾಗೂ ಡಿಪ್ಲೋಮಾ ಪ್
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಶುಲ್ಕ ಪರಿಷ್ಕರಣೆ


ರಾಯಚೂರು, 26 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ 2025-26ನೇ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಪ್ರಥಮ ವರ್ಷ ಡಿಪ್ಲೋಮಾ ಕೋರ್ಸುಗಳು ಹಾಗೂ ಲ್ಯಾಟರಲ್ ಎಂಟ್ರಿ ದ್ವಿತೀಯ ವರ್ಷಕ್ಕೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಬೋಧನಾ ಶುಲ್ಕ ಹಾಗೂ ಡಿಪ್ಲೋಮಾ ಪ್ರವೇಶ ಅರ್ಜಿ ಶುಲ್ಕವನ್ನು ಪರಿಷ್ಕರಿಸಲಾಗಿದೆ.

ಪ್ರಸ್ತುತ 2940 ರೂ.ಗಳು ಬೋಧನಾ ಶುಲ್ಕವಾಗಿದ್ದು, 3250ರೂ.ಗಳಿಗೆ ಬೋಧನಾ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಸಾಮಾನ್ಯ ವರ್ಗ/2ಎ/2ಬಿ/3ಎ/3ಬಿ ವರ್ಗಗಳಿಗೆ ಪ್ರಸ್ತತ 100ರೂ.ಗಳ ಪ್ರವೇಶದ ಅರ್ಜಿ ಶುಲ್ಕವಿದ್ದು, 200ರೂ.ಗಳಿಗೆ ಪರಿಷ್ಕøತ ಮಾಡಲಾಗಿದೆ. ಪ.ಜಾ/ಪ.ಪಂ/ಪ್ರವರ್ಗ-1 ವರ್ಗಗಳಿಗೆ ಪ್ರಸ್ತತ 50 ರೂ.ಗಳ ಪ್ರವೇಶದ ಅರ್ಜಿ ಶುಲ್ಕವಿದ್ದು, 100ರೂ.ಗಳಿಗೆ ಪರಿಷ್ಕøತ ಮಾಡಲಾಗಿದೆ ಎಂದು ರಾಯಚೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande