ಆಗಸ್ಟ್ 29ಕ್ಕೆ ಮಧುಮೇಹ ಜಾಗೃತಿ ಜಾಥಾ
ವಿಜಯಪುರ, 26 ಆಗಸ್ಟ್ (ಹಿ.ಸ.) : ವಿಜಯಪುರ : ನಗರದ ಪ್ರತಿಷ್ಠಿತ ಬಿ.ಎಲ್.ಡಿ.‌ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ಪಬ್ಲಿಕ್ ಶಾಲೆಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಆಗಸ್ಟ್ 29 ರಂದು ಶುಕ್ರವಾರ ಮಧುಮೇಹ ಜಾಗೃತಿ ಜಾಥಾ ನಡೆಯಲಿದೆ. ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗ
ಆಗಸ್ಟ್ 29ಕ್ಕೆ ಮಧುಮೇಹ ಜಾಗೃತಿ ಜಾಥಾ


ವಿಜಯಪುರ, 26 ಆಗಸ್ಟ್ (ಹಿ.ಸ.) :

ವಿಜಯಪುರ : ನಗರದ ಪ್ರತಿಷ್ಠಿತ ಬಿ.ಎಲ್.ಡಿ.‌ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ಪಬ್ಲಿಕ್ ಶಾಲೆಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ

ಆಗಸ್ಟ್ 29 ರಂದು ಶುಕ್ರವಾರ ಮಧುಮೇಹ ಜಾಗೃತಿ ಜಾಥಾ ನಡೆಯಲಿದೆ.

ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಈ ಜಾಗೃತಿ ಜಾಥಾ ನಡೆಯಲಿದೆ. ಸಕ್ಕರೆ ಕಾಯಿಲೆ ಹಲವು ರೋಗಗಳ ತವರಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಅನೇಕ ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅವರೆಲ್ಲರಲ್ಲಿ ಆರೋಗ್ಯದ ಜಾಗೃತಿಯನ್ನು ಉಂಟು ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9ಕ್ಕೆ ಬಿ.ಎಲ್.ಡಿ.ಇ ಆಸ್ಪತ್ರೆಯಿಂದ ಸಿದ್ದೇಶ್ವರ ಗುಡಿಯ ಮಾರ್ಗವಾಗಿ ಗಾಂಧಿ ಚೌಕಿನವರೆಗೂ ಈ‌ ಜಾಥಾ ನಡೆಯಲಿದೆ ಎಂದು ಶಾಲೆಯ ಪ್ರಾಚಾರ್ಯ ಶೈಜೂ ಕೆ.‌ ನಾಯರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande