ಹೊಸಪೇಟೆ , 26 ಆಗಸ್ಟ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ವತಿಯಿಂದ 13 ಫಲಾನುಭವಿ ಆಧಾರಿತ ಸೌಲಭ್ಯಗಳನ್ನು ಒದಗಿಸಲು, ಇಲಾಖೆ ಯೋಜನೆಯಡಿ ನೇರ ನಗದು ವರ್ಗಾವಣೆ(ಡಿಬಿಟಿ)ಯನ್ನು ಅಳವಡಿಸಲಾಗಿದ್ದು. ವಿಕಲಚೇತನರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಮಾಂಜಿನೇಯ ತಿಳಿಸಿದ್ದಾರೆ.
ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ಶಿಶುಪಾಲನ ಭತ್ಯೆ, ನಿರುದ್ಯೋಗ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ(ಪ್ರತಿಭೆ ಪುರಸ್ಕಾರ), ವೈದ್ಯಕೀಯ ಪರಿಹಾರ ನಿಧಿ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, ದೈಹಿಕ ವಿಕಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ, ಸಾಧನ ಸಲಕರಣೆಗಳ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ದೃಷ್ಠಿ ದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್ ಕಿಟ್ ಯೋಜನೆ ಮತ್ತು ಬ್ಯಾಟರಿ ಚಾಲಿತ ವ್ಹೀಲ್ ಚೇರ್ ಯೋಜನೆಗಳಿಗೆ ಅರ್ಹ ಫಲಾನುಭವಿಗಳು ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಸೇವಾ ಸಿಂಧು ಆನ್‍ಲೈನ್ https://sevasindhu.karnataka.gov.in/sevasindhu/kannad ಪೋರ್ಟಲ್‍ನಲ್ಲಿ ಸೆ.30ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿ ವಿಆರ್‍ಡಬ್ಲ್ಯೂ, ನಗರ ಸಭೆ, ಪಟ್ಟಣ ಪಂಚಾಯಿತಿಯ ಯುಆರ್‍ಡಬ್ಲ್ಯೂ ಮತ್ತು ತಾಲೂಕು ಪಂಚಾಯಿತಿಯ ಎಂಆರ್‍ಡಬ್ಲ್ಯೂ ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಅಗಾಪೆ ಎಜಿ ಪ್ರಾರ್ಥನಾಲಯ ಎದುರು ರಸ್ತೆ, ಡಿಸಿ ರವಿ ಸಿವಿಲ್ ಇಂಜಿನಿಯರ್ ಕಟ್ಟಡ, ಅಮರಾವತಿ, ಹೊಸಪೇಟೆ. ಇವರನ್ನು ಕಚೇರಿಯ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್