ಬಳ್ಳಾರಿ, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಯಾಳ್ಪಿ ಗ್ರಾಮದ ಮುಖಂಡರು, ವೀರಶೈವ ಸಮಾಜದ ಮುಖಂಡರೂ ಆಗಿರುವ ಯಾಳ್ಪಿ ಪೊಂಪನಗೌಡ ಅವರ ಸಹೋದರರು ಮತ್ತು ಕುಟುಂಬದ ಸದಸ್ಯರು ಯಾಳ್ಪಿ ಗ್ರಾಮದಲ್ಲಿ
`ಶ್ರೀ ಜಗದ್ಗುರು ಸಿದ್ದಲಿಂಗೇಶ ಬ್ರಹನ್ಮಠ'ದ ನಿರ್ಮಾಣಕ್ಕಾಗಿ ಯಾಳ್ಪಿ ಮತ್ತು ಕುಂಟನಹಾಳು ಗ್ರಾಮದ ಭಕ್ತರ ಸಮ್ಮುಖದಲ್ಲಿ ಅರ್ಧ ಎಕರೆ ಭೂಮಿಯನ್ನು ಚನ್ನವೀರ ಶಿವಾಚಾರ್ಯರಿಗೆ ದಾನವಾಗಿ ನೀಡಿದ್ದಾರೆ.
ಯಾಳ್ಪಿ ಗ್ರಾಮಕ್ಕೆ ಪಾಲ್ತೂರು ಚನ್ನವೀರ ಶಿವಾಚಾರ್ಯರು ಮತ್ತು ಅಜಾತ ಶಂಭುಲಿಂಗ ಮಹಾಸ್ವಾಮಿಗಳನ್ನು ದಾನಿಗಳ ಕುಟುಂಬದ ಸದಸ್ಯರು ಆಹ್ವಾನಿಸಿ, `ಶ್ರೀ ಜಗದ್ಗುರು ಸಿದ್ದಲಿಂಗೇಶ ಬ್ರಹನ್ಮಠ'ದ ನಿರ್ಮಾಣಕ್ಕಾಗಿ ಗ್ರಾಮದ ವ್ಯಾಪ್ತಿಯಲ್ಲಿ ಕುಟುಂಬದ ಭೂಮಿಯನ್ನು ದಾನವಾಗಿ ನೀಡಿ, ಭೂಮಿ ಪೂಜೆಯನ್ನು ನೆರವೇರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್