ರಾಯಚೂರು, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ನಗರದ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಯಾತಲಾಬ್ ನಿವಾಸಿಯಾದ ಮೆಹರುನ್ನೀಸಾ ಬೇಗಂ ಗಂಡ ಮಹೆಬೂಬ್ ವಯಸ್ಸು (39) ಕಾಣೆಯಾಗಿದ್ದು, ಈ ಕುರಿತು ಸದರ ಬಜಾರ ಪೊಲೀಸ್‍ಠಾಣೆಯ ಗುನ್ನೆ ನಂಖ್ಯೆ: 65/2025 ಕಲಂರಡಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಚಹರೆ: ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ತಲೆಯಲ್ಲಿ ಕಪ್ಪು ಕೂದಲು, 4.6 ಅಡಿ ಎತ್ತರ ಹೊಂದಿದ್ದು,ಪಿಂಕ್ ಬಣ್ಣದ ಪಂಜಾಬಿ ಡ್ರೆಸ್ ಮತ್ತು ಕಪ್ಪು ಬಣ್ಣದ ಬುರ್ಖಾ ಧರಿಸಲಾಗಿದ್ದು, ಕನ್ನಡ, ಉರ್ದು ಹಾಗೂ ಹಿಂದಿ ಭಾಷೆ ಮಾತನಾಡುತ್ತಾಳೆ.
ಈ ಮಹಿಳೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಸದರ ಬಜಾರ ಪೊಲೀಸ್, ಠಾಣೆ ದೂರವಾಣಿ ಸಂಖ್ಯೆ: 08532-226148 ಅಥವಾ ಅರಕ್ಷಕ ನಿರೀಕ್ಷಕರು ಸದರ್ ಬಜಾರ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ; 9480803830ಗೆ ಮಾಹಿತಿ ನೀಡುವಂತೆ ಸದರ ಬಜಾರ್ ಪೊಲೀಸ್, ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್