ರಾಯಚೂರು, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಮಾನವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವ್ಯಾಪ್ತಿಯಲ್ಲಿ 2025-26ನೇ ಸಾಲಿಗೆ ಅಂಗನವಾಡಿ ಕಾರ್ಯಕರ್ತೆ-01 ಮತ್ತು ಸಹಾಯಕಿಯರು-12 ಖಾಲಿ ಹುದ್ದೆಗಳಿಗೆ ಜಿಲ್ಲಾ ಆಯ್ಕೆ ಸಮಿತಿಯಿಂದ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಅಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗಿದೆ.
ಪೋತ್ನಾಳ ಅಂವಾನವಾಡಿ ಕೇಂದ್ರ-08ರಲ್ಲಿ ಕಾರ್ಯಕರ್ತೆಯರ ಹುದ್ದೆಗೆ ಸಾನೀಯಾ ಬೇಗಂ ತಂದೇ ಶೇಖರ್ ಮುನೀರ್ ಇವರು ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಮಾನವಿ ಪುರಸಭೆಯ ವಾರ್ಡ ನಂ-01ರ ಜಯನಗರ ಅಂಗನವಾಡಿ ಕೇಂದ್ರಕ್ಕೆ ಪಲ್ಲವಿ ತಂದೆ ಮಹಾದೇವಪ್ಪ, ಮಾನವಿ ಪುಸರಭೆ ವಾರ್ಡ ನಂ-03ರ ವಿಠ್ಠಲ ನಗರ ಅಂಗನವಾಡಿ ಕೇಂದ್ರಕ್ಕೆ ನಾಗಮ್ಮ ತಂದೆ ಪಾಂಡು ನಾಯಕ, ಪೋತ್ನಾಳ ಅಂಗನವಾಡಿ ಕೇಂದ್ರ-9ಕ್ಕೆ ಸಂಗೀತಾ ತಂದೆ ಸೂಗಪ್ಪ, ಪೆÇೀತ್ನಾಳ ಅಂಗನವಾಡಿ ಕೇಂದ್ರ-7ಕ್ಕೆ ಸಂಗೀತಾ ತಂದೆ ಸೂಗಪ್ಪ, ಕುರ್ಡಿ ಅಂಗನವಾಡಿ ಕೇಂದ್ರ-9ಕ್ಕೆ ದುರ್ಗಿ ಆರ್. ತಂದೆ ರಂಗಪ್ಪ, ಗೋರ್ಕಲ್ ಜೂಕೂರು ಅಂಗನವಾಡಿ ಕೇಂದ್ರ-2ಕ್ಕೆ ನಾಗಮ್ಮ ತಂದೆ ಹನುಮಯ್ಯ, ಅರೋಲಿ ಅಂಗನವಾಡಿ ಕೇಂದ್ರ-1ಕ್ಕೆ ಬಸಲಿಂಗಮ್ಮ ತಂದೆ ಸಿದ್ದಪ್ಪ, ಮದ್ಲಾಪೂರು ಅಂಗನವಾಡಿ ಕೇಂದ್ರ-1ಕ್ಕೆ ಮಂಜುಳಾ ತಂದೆ ಶಿವಬಸಯ್ಯ, ಮದ್ಲಾಪೂರು ಅಂಗನವಾಡಿ ಕೇಂದ್ರ-2ಕ್ಕೆ ಶ್ವೇತಾ ತಂದೆ ಮಹಾದೇಪ್ಪ, ಸಾದಾಪೂರು ಕೋರವಿ ಅಂಗನವಾಡಿ ಕೇಂದ್ರ-3ಕ್ಕೆ ಕಾವೇರಿ ಟಿ ತಂದೆ ವೆಂಕಟೇಶ ಕೆ., ಅರೋಲಿ ರಾಜೋಳ್ಳಿ ಅಂಗನವಾಡಿ-1ಕ್ಕೆ ಚಾಮುಂಡಿ ತಂದೆ ಸಣ್ಣ ಭೀಮಯ್ಯ ಗೊಸಿಬತ್ಲು, ಅರೋಲಿ ರಾಜೋಳ್ಳಿ ಅಂಗನವಾಡಿ ಕೇಂದ್ರ-5ಕ್ಕೆ ಅನುಸೂಯ ತಂದೆ ಹನುಮಪ್ಪ ಕರೆಗುಡ್ಡ ಇವರು ತಾತ್ಕಾಲಿಕವಾಗಿ ಆಯ್ಕೆಯಾಗಿದ್ದು, ಈ ತಾತ್ಕಾಲಿಕ ಆಯ್ಕೆಪಟ್ಟಿಗೆ ಅಕ್ಷೇಪಣೆ ಅರ್ಜಿ ಸಲ್ಲಿಸುವವರು ಸೂಕ್ತ ದಾಖಲಾತಿಗಳೊಂದಿಗೆ ಆಗಸ್ಟ್ 30ರ ಸಂಜೆ 5.30ರೊಳಗೆ ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳು ಮಾನವಿ ಅವರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲ್ಲಿಸುವವರು ಆಕ್ಷೇಪಣೆ ಅರ್ಜಿಯ ಜೊತೆಗೆ ಯಾವುದೇ ದಾಖಲಾತಿಗಳು ಸಲ್ಲಿಸದಿದ್ದಲ್ಲಿ ಅಂತಹವರ ಅಕ್ಷೇಪಣೆ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಾಲಯ ಮಾನವಿ ಅವರನ್ನು ಸಂಪರ್ಕಿಸುವಂತೆ ಮಾನವಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್