ಬಳ್ಳಾರಿ, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಡಿ.ಹಿರೇಹಾಳ(ದಂಡಿನ ಹಿರೇಹಾಳ) ಗ್ರಾಮದ ಶತಾಯುಷಿ ನಾಗಮ್ಮ ಬಸಪ್ಪ ಸಿಂಗಾಡಿ(99) ಆಗಸ್ಟ್ 25 ಬೆಳಿಗ್ಗೆ 4 ಗಂಟೆಗೆ ನಿಧನ ಹೊಂದಿದರು.
ಮೃತರಿಗೆ ಐದು ಜನ ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಆಗಸ್ಟ್ 25 ರಂದು ಸಂಜೆ 4 ಗಂಟೆಗೆ ಸ್ವಗ್ರಾಮ ಡಿ.ಹಿರೇಹಾಳದಲ್ಲಿ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್