ಜಮಖಂಡಿ ಗಜಾನನ ಮಂಡಳಿಗಳಿಗೆ ಪ್ರೋತ್ಸಾಹ ದೇಣಿಗೆ : ಗುಡಗುಂಟಿ
ವಿಜಯಪುರ, 25 ಆಗಸ್ಟ್ (ಹಿ.ಸ.) : ಆ್ಯಂಕರ್ : ಪ್ರತಿ ವರ್ಷವು ಗಜಾನನ ಉತ್ಸವಕ್ಕಾಗಿ ಗಜಾನನ ಮಹಾಮಂಡಳ ಜಮಖಂಡಿ ಇವರಲ್ಲಿ ನೋಂದಾಯಿತ ಎಲ್ಲ ಗಜಾನನ ಮಂಡಳಿಗಳಿಗೆ ಪ್ರೋತ್ಸಾಹ ದೇಣಿಗೆ ನೀಡಲಿದ್ದೇವೆ ಎಂದು ಶಾಸಕ ಜಗದೀಶ್ ಗುಡಗುಂಟಿ ಹೇಳಿದರು. ಜಮಖಂಡಿ ಗೃಹ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ
ಗಣಪತಿ


ವಿಜಯಪುರ, 25 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ರತಿ ವರ್ಷವು ಗಜಾನನ ಉತ್ಸವಕ್ಕಾಗಿ ಗಜಾನನ ಮಹಾಮಂಡಳ ಜಮಖಂಡಿ ಇವರಲ್ಲಿ ನೋಂದಾಯಿತ ಎಲ್ಲ ಗಜಾನನ ಮಂಡಳಿಗಳಿಗೆ ಪ್ರೋತ್ಸಾಹ ದೇಣಿಗೆ ನೀಡಲಿದ್ದೇವೆ ಎಂದು ಶಾಸಕ ಜಗದೀಶ್ ಗುಡಗುಂಟಿ ಹೇಳಿದರು.

ಜಮಖಂಡಿ ಗೃಹ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಣಪತಿ 5, 7, 9,11 ದಿನಗಳ ಗಜಾನನ ಮಂಡಳಿಗಳಿಗೆ *5000/- ರೂ* ನೀಡಲಿದ್ದೇವೆ. ಹಾಗೂ ಗ್ರಾಮಾಂತರ ಪ್ರದೇಶದ ಎಲ್ಲ ಗಣೇಶ ಮಂಡಳಗಳಿಗೆ 25 ಕೆಜಿ ಸಕ್ಕರೆ ನೀಡಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳು, ನಗರ ಹಾಗೂ ಗ್ರಾಮೀಣ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಶರೀ ಮಲ್ಲು ದಾನಗೌಡ, ಮುಖಂಡರಾದ ರಾಕೇಶ ಲಾಡ್‌, ಪ್ರಧಾನ ಕಾರ್ಯದರ್ಶಿ ಗಣೇಶ ಶಿರಗಣ್ಣವರ, ಗಜಾನನ ಮಹಾಮಂಡಲ ಅಧ್ಯಕ್ಷ ಸಚೀನ ಪಟ್ಟಣಶೆಟ್ಟಿ, ಮಾಧ್ಯಮ ಸಂಚಾಲಕ ಶ್ರೀಧರ ಕಂಬಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande