ಜೆಸ್ಕಾಂ ನಗರ-01 : ನಾಳೆ ವಿದ್ಯುತ್ ವ್ಯತ್ಯಯ
ರಾಯಚೂರು, 25 ಆಗಸ್ಟ್ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ-1ರಲ್ಲಿ ಗಣೇಶ ಹಬ್ಬದ ಮೆರವಣಿಗೆ ಮತ್ತು ಈದ್ ಮಿಲಾದ್ ಹಬ್ಬದ ಅಂಗವಾಗಿ 11ಕೆವಿ ಮಾರ್ಗ ಹಾಗೂ ವಿದ್ಯುತ್ ಪರಿವರ್ತಕ ದುರಸ್ತಿ ಕಾಮಗಾರಿ ಮತ್ತು ರಿ-ಕಂಡಕ್ಟರಿಂಗ್ ನಿರ್ವಹಿಸುತ್ತಿರುವ ಪ್ರಯುಕ್ತ ಆಗಸ್ಟ್ 26ರ ಬೆಳಿಗ
ಜೆಸ್ಕಾಂ ನಗರ-01 : ನಾಳೆ ವಿದ್ಯುತ್ ವ್ಯತ್ಯಯ


ರಾಯಚೂರು, 25 ಆಗಸ್ಟ್ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ-1ರಲ್ಲಿ ಗಣೇಶ ಹಬ್ಬದ ಮೆರವಣಿಗೆ ಮತ್ತು ಈದ್ ಮಿಲಾದ್ ಹಬ್ಬದ ಅಂಗವಾಗಿ 11ಕೆವಿ ಮಾರ್ಗ ಹಾಗೂ ವಿದ್ಯುತ್ ಪರಿವರ್ತಕ ದುರಸ್ತಿ ಕಾಮಗಾರಿ ಮತ್ತು ರಿ-ಕಂಡಕ್ಟರಿಂಗ್ ನಿರ್ವಹಿಸುತ್ತಿರುವ ಪ್ರಯುಕ್ತ ಆಗಸ್ಟ್ 26ರ ಬೆಳಿಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

ಬೆಳಿಗ್ಗೆ 10ರಿಂದ ಜೈನ್ ಮಂದಿರ, ಭೂ ಭವನ, ಉಷಾ ಲ್ಯಾಬ್, ಕಂದಕಡ್ಡೆ ಮಾರೆಮ್ಮಗುಡಿ, ತರಕಾರಿ ಮಾರುಕಟ್ಟೆ ಹಿಂಬಾಗ, ಹಳೆ ಹಮ್‍ದರದ್ ಶಾಲೆ, ಮಡಿವಾಳ ಓಣಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande