ರಾಯಚೂರು, 25 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬ್ಲಾಕ್ ಸ್ಪಾಟ್‍ಗಳನ್ನು ಕಡಿಮೆ ಮಾಡಲು ಮತ್ತು ಸ್ವಚ್ಚತೆ ಕಾಪಾಡಲು ರಾಯಚೂರು ನಗರದಾದ್ಯಂತ ಕಸದ ಡಬ್ಬಿ ಇಡುವುದನ್ನು ಸುವ್ಯವಸ್ಥಿತವಾಗಿ ಮಾಡಲಾಗುವುದು ಎಂದು ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್ ಶಿವರಾಜ ಪಾಟೀಲ ಅವರು ಹೇಳಿದರು.
650 ಲೀಟರ್ ಸಾಮಥ್ರ್ಯದ 72 ಕಸದ ಡಸ್ಟಬಿನಗಳನ್ನು ಅಳವಡಿಸಲು, ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿನ ರಾಯಚೂರು ಮಹಾನಗರ ಪಾಲಿಕೆಯ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 25ರಂದು ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಯಚೂರು ನಗರವು ಸುಂದರವಾಗಿ ಕಾಣಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯು ನಗರದಲ್ಲಿ ಬ್ಲಾಕ್ ಸ್ಪಾಟ್‍ಗಳನ್ನು ಕಡಿಮೆ ಮಾಡಲು ಮತ್ತು ಸ್ವಚ್ಚತೆ ಕಾಪಾಡಲು ನಗರದಾದ್ಯಂತ ಕಸದ ಡಬ್ಬಿ ಇಡಲಾಗುತ್ತಿದೆ ಎಂದರು.
ಖಾಸಗಿಯವರ ಸಹಭಾಗೀತ್ವದಲ್ಲಿ ಪ್ರತಿಷ್ಠಿತ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಮತ್ತು ಶಿಲ್ಪಾ ಫೌಂಡೇಶನ್ ದಿಂದ 10 ಲಕ್ಷ ರೂಪಾಯಿ ಮತ್ತು ಐ.ಎಂ.ಎ ಅವರು 10 ಲಕ್ಷ ರೂಪಾಯಿ ಸ್ವಚ್ಛ ನಗರಕ್ಕಾಗಿ ದೇಣಿಗೆ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಶಾಸಕರು ತಿಳಿಸಿದರು.
ಪಾಲಿಕೆಯ ಹಿರಿಯ ಸದಸ್ಯರಾದ ಜಯಣ್ಣ ಅವರು ಮಾತನಾಡಿ, ಸಾರ್ವಜನಿಕರ ಸಹಮತ ಮತ್ತು ಸಹಕಾರವಿಲ್ಲದೆ ಯಾವ ಯೋಜನೆಯು ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಮತ್ತು ಶಿಲ್ಪಾ ಫೌಂಡೇಶನ್ನಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಟ್ರಸ್ಟಿ ವಿಷ್ಣುಕಾಂತ ಅವರು ಮಾತನಾಡಿ, ನಗರದ ಪ್ರಜೆಯಾಗಿ ನಗರದ ಸವಾರ್ಂಗೀಣ ಅಭಿವೃದ್ಧಿಗೆ ಯಾವಾಗಲು ನಾವು ಸಿದ್ದರಿದ್ದೇವೆ. ಮಹಾನಗರದಲ್ಲಿ ಹಾಕುವ ಡಸ್ಟಬಿನಗಳು ಸದುಪಯೋಗವಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಹಿರಿಯ ಸದಸ್ಯರಾದ ಜಯಣ್ಣ, ಜಿಂದಪ್ಪ, ಶಶಿರಾಜ ಎನ್ ಕೆ. ನಾಗರಾಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್