ಮೋಟಾರು ಸೈಕಲ್ ವಿಮಾ ಮೊತ್ತ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ
ಬಳ್ಳಾರಿ, 25 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಪ್ರೋ.ಪೋರಾಜೆನ್ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಕೆ.ಅನಿಲ್ ಕುಮಾರ್ ರೆಡ್ಡಿ ಅವರ ಕಳ್ಳತನವಾದ ಮೋಟಾರು ಸೈಕಲ್ ನ ವಿಮಾ ಮೊತ್ತ ಪಾವತಿಸುವಂತೆ ಹುಬ್ಬಳ್ಳಿಯ ಚೋಲ ಎಂಎಸ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನ ವ್ಯವಸ್ಥಾಪಕರಿಗೆ ಜ
ಮೋಟಾರು ಸೈಕಲ್ ವಿಮಾ ಮೊತ್ತ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ


ಬಳ್ಳಾರಿ, 25 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಪ್ರೋ.ಪೋರಾಜೆನ್ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಕೆ.ಅನಿಲ್ ಕುಮಾರ್ ರೆಡ್ಡಿ ಅವರ ಕಳ್ಳತನವಾದ ಮೋಟಾರು ಸೈಕಲ್ ನ ವಿಮಾ ಮೊತ್ತ ಪಾವತಿಸುವಂತೆ ಹುಬ್ಬಳ್ಳಿಯ ಚೋಲ ಎಂಎಸ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ಆಯೋಗವು ಆದೇಶಿಸಿದೆ.

ಕೆ.ಅನಿಲ್ ಕುಮಾರ್ ರೆಡ್ಡಿ ತಮ್ಮ ವಾಹನ ಸಂ. ಕೆಎ 34 ಇಪಿ 8879 ಗೆ 16-01-2023 ರಿಂದ 15-01-2024 ರವರೆಗಿನ ಅವಧಿಗೆ ವಿಮೆ ಮಾಡಿಸಿದ್ದರು. ವಿಮಾ ಪಾಲಿಸಿ ಚಾಲ್ತಿ ಅವಧಿಯಲ್ಲಿ 05-02-2023 ರಂದು ಮೋಕಾ ಗ್ರಾಮದಲ್ಲಿ ಕಾಣೆಯಾಗಿದ್ದು, ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಹಾಗೂ ವಾಹನವು ಪತ್ತೆಯಾಗದ ಕಾರಣ ಪೊಲೀಸ್ ಇಲಾಖೆಯಿಂದ ನ್ಯಾಯಾಲಯಕ್ಕೆ “ಸಿ” ಅಂತಿಮ ವರದಿ ಸಲ್ಲಿಸಿದ್ದರು. ವಾಹನಕ್ಕೆ ಸಂಬಂಧಿಸಿದ ದಾಖಲೆ ಹಾಗೂ ಪೊಲೀಸ್ ವರದಿ ಸೇರಿ ವಿಮಾ ಕಂಪನಿಗೆ ರೂ.72,022 ಮತ್ತು ಸೇವಾ ನ್ಯೂನ್ಯತೆ, ದೂರಿನ ವೆಚ್ಚ ಪಾವತಿಸುವಂತೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ವಿಮಾ ಕಂಪನಿಯು ಪ್ರಕರಣದಲ್ಲಿ ಹಾಜರಾಗಿ ವಾಹನವು ಕಂಪನಿಯ ನಿರ್ದೇಶಕ ಹೆಸರಿನಲ್ಲಿರುವುದರಿಂದ ದೂರುದಾರರು ಗ್ರಾಹಕರಾಗುವುದಿಲ್ಲ ಹಾಗೂ ವಿಮಾ ಕಂಪನಿಗೆ ಕಳ್ಳತನವಾದ 424 ದಿನಗಳ ನಂತರ ಕ್ಲೈಮ್ ಸಲ್ಲಿಸಿರುವುದರಿಂದ ವಿಮಾ ಪಾಲಿಸಿಯ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಕ್ಲೈಮ್‍ನ್ನು ತಿರಸ್ಕರಿಸಿರುವುದಾಗಿ ಆಯೋಗಕ್ಕೆ ತಕರಾರು ಸಲ್ಲಿಸಿದ್ದರು.

ಆಯೋಗದ ಅಧ್ಯಕ್ಷರಾದ ಎನ್.ತಿಪ್ಪೇಸ್ವಾಮಿ ಮತ್ತು ಸದಸ್ಯರಾದ ಮಾರ್ಲಾ ಶಶಿಕಲಾ ಅವರು ಪ್ರಕರಣದ ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ವಾದ ವಿವಾದ ಆಲಿಸಿದ ನಂತರ ದೂರುದಾರರು ವಿಮಾ ಪಾಲಿಸಿಗಾಗಿ ವಿಮಾ ಕಂತು ಪಾವತಿಸುವುದರಿಂದ ಗ್ರಾಹಕರಾಗಿರುತ್ತಾರೆ ಹಾಗೂ ವಿಮಾ ಕಂಪನಿಯು ಕ್ಲೈಮ್‍ನ್ನು ಯಾವ ದಿನಾಂಕಕ್ಕೆ ಸಲ್ಲಿಸಿರುವುದೆಂದು ಆಯೋಗಕ್ಕೆ ದಾಖಲಾತಿ ಒದಗಿಸದಿರುವುದು ಸೇವಾ ನಿರ್ಲಕ್ಷ್ಯತನ ಎಂದು ಪರಿಗಣಿಸಿದೆ.

ದೂರುದಾರರು ಕೂಡ ವಿಮಾ ಪಾಲಿಸಿಯ ಷರತ್ತನ್ನು ಉಲ್ಲಂಘಿಸಿದ ಕಾರಣ ನಾನ್- ಸ್ಟ್ಯಾಂಡರ್ಡ್ ಆಧಾರದಲ್ಲಿ ಪಾಲಿಸಿ ಮೊತ್ತದ ಶೇ.75 ರಷ್ಟು ಅಂದರೆ ರೂ.54,000, ಮಾನಸಿಕ ಹಿಂಸೆಗೆ ಪರಿಹಾರ ರೂ.10,000 ಮತ್ತು ದೂರಿನ ವೆಚ್ಚ ಮೊತ್ತ ರೂ.5,000 ಗಳನ್ನು ವಿಮಾ ಕಂಪನಿಯು ದೂರುದಾರರಿಗೆ 45 ದಿನಗಳೊಳಗಾಗಿ ಪಾವತಿಸುವಂತೆ, ತಪ್ಪಿದಲ್ಲಿ ರೂ.54,000 ಗಳಿಗೆ ಶೇ.8 ರಷ್ಟು ಬಡ್ಡಿ ಪಾವತಿಸುವಂತೆ ಆಯೋಗ ಆದೇಶಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande