ಅಪಘಾತ ವಿಮೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ
ಬಳ್ಳಾರಿ, 25 ಆಗಸ್ಟ್ (ಹಿ.ಸ.) : ಆ್ಯಂಕರ್ : ಅಪಘಾತಕ್ಕೀಡಾಗಿ ಸಾವನ್ನಪ್ಪಿದ ನಗರದ ನಿವಾಸಿ ದಿಗಂತ ಶಫೀ ಎಂಬುವವರಿಗೆ ಅಪಘಾತ ವಿಮೆ ಪಾವತಿಸುವಂತೆ ಮೆ.ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನ ಶಾಖಾ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ಆಯೋಗವು ಆದೇಶಿಸಿದೆ. ದಿಗಂತ ಶಫೀ ತಮ್ಮ ಮೋಟಾರು ಸೈಕಲ್
ಅಪಘಾತ ವಿಮೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ


ಬಳ್ಳಾರಿ, 25 ಆಗಸ್ಟ್ (ಹಿ.ಸ.) :

ಆ್ಯಂಕರ್ : ಅಪಘಾತಕ್ಕೀಡಾಗಿ ಸಾವನ್ನಪ್ಪಿದ ನಗರದ ನಿವಾಸಿ ದಿಗಂತ ಶಫೀ ಎಂಬುವವರಿಗೆ ಅಪಘಾತ ವಿಮೆ ಪಾವತಿಸುವಂತೆ ಮೆ.ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನ ಶಾಖಾ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ಆಯೋಗವು ಆದೇಶಿಸಿದೆ.

ದಿಗಂತ ಶಫೀ ತಮ್ಮ ಮೋಟಾರು ಸೈಕಲ್ ಸಂ. ಕೆಎ 34/ಇಪಿ 1257 ಗೆ 01-02-2023 ರಿಂದ 30-11-2024 ರ ಅವಧಿಗೆ ವಿಮಾ ಕಂಪನಿಯಿಂದ ವಿಮಾ ಪಾಲಿಸಿ ಪಡೆದಿದ್ದರು. 03-06-2024 ರಂದು ಜೋಳದರಾಶಿ ಗ್ರಾಮದ ಬಳಿ ಅಪಘಾತಕ್ಕೀಡಾಗಿ ತೀವ್ರ ಗಾಯಗೊಂಡು ಬಿಎಂಸಿಆರ್‍ಸಿ (ವಿಮ್ಸ್) ಆಸ್ಪತ್ರೆಗೆ ದಾಖಲೆಗೊಂಡು 08-06-2024 ರಂದು ನಿಧನ ಹೊಂದಿದ್ದರು. ಅವರ ಪತ್ನಿ ಹೀನಾ ಕೌಸರ್ ಆ ಪ್ರದೇಶದ ವ್ಯಾಪ್ತಿಯ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ವಿಮಾ ಕಂಪನಿಗೆ ಮಾಹಿತಿ ಸಹ ನೀಡಿದ್ದರು. ಸೂಕ್ತ ದಾಖಲೆ ಸಲ್ಲಿಸಿದ್ದ ಅವರ ಕ್ಲೈಮ್‍ನ್ನು ತಿರಸ್ಕರಿಸಿರುವುದಿಲ್ಲ ಮತ್ತು ವಿಮಾ ಮೊತ್ತವನ್ನೂ ಸಹ ಪಾವತಿಸಿರುವುದಿಲ್ಲ. ಹಾಗಾಗಿ ರೂ.15,00,000 ವೈಯಕ್ತಿಕ ಅಪಘಾತದ ಮೊತ್ತ ಹಾಗೂ ಇತರೆ ಪರಿಹಾರ ಕೋರಿ ಆಯೋಗಕ್ಕೆ ದೂರು ದಾಖಲಿಸಿದ್ದರು.

ಆಯೋಗದ ಅಧ್ಯಕ್ಷರಾದ ಎನ್.ತಿಪ್ಪೇಸ್ವಾಮಿ ಹಾಗೂ ಸದಸ್ಯರಾದ ಮಾರ್ಲಾ ಶಶಿಕಲಾ ಅವರು ಉಭಯ ಪಕ್ಷಕಾರರ ವಾದ ವಿವಾದ ಆಲಿಸಿದ ನಂತರ ದೂರುದಾರರ ಪತಿಯು ಅಪಘಾತದ ಸಮಯದಲ್ಲಿ ಸೂಕ್ತ ಚಾಲನಾ ಪರವಾನಿಗೆ ಹಾಗೂ ವಾಹನದ ದಾಖಲೆಗಳನ್ನು ಸಮರ್ಪಕವಾಗಿ ಹೊಂದಿದ್ದರು ಎಂದು ತಿಳಿಸಿದೆ.

ವಿಮಾ ಕಂಪನಿಯು ಪಾಲಿಸಿ ವಿತರಿಸುವ ಸಮಯದಲ್ಲಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ನಂತರ ಪಾಲಿಸಿಯನ್ನು ವಿತರಿಸಬೇಕೇ ವಿನಃ ಕ್ಲೈಮ್ ಸಲ್ಲಿಸಿದ ಸಮಯದಲ್ಲಿ ವಿಮಾ ಮೊತ್ತ ಪಾವತಿಸಲು ತಕರಾರು ತೆಗೆಯುವುದು ಸಮಂಜಸವಲ್ಲ. ಜೊತೆಗೆ ದೂರನ್ನು ತಡವಾಗಿ ಸಲ್ಲಿಸಿದ ಮಾತ್ರಕ್ಕೆ ಕ್ಲೈಮ್‍ನ್ನು ತಿರಸ್ಕರಿಸುವಂತಿಲ್ಲ. ಇದು ಸೇವಾ ನ್ಯೂನ್ಯತೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ದೂರುದಾರರು ಯಾವ ದಿನಾಂಕದಂದು ವಿಮಾ ಕಂಪನಿಗೆ ಮಾಹಿತಿ ಸಲ್ಲಿಸಿದ್ದಾರ ಎಂದು ಆಯೋಗಕ್ಕೆ ಸ್ಪಷ್ಟವಾಗಿ ಮಾಹಿತಿ ಸಲ್ಲಿಸದ ಕಾರಣ ಎದುರುದಾರರು ವೈಯಕ್ತಿಕ ಅಪಘಾತದ ವಿಮಾ ಮೊತ್ತ ರೂ.15,00,000 ಗಳಲ್ಲಿ ಶೇ.75 ರಷ್ಟು ಅಂದರೆ ರೂ.11,25,000 ಮತ್ತು ದೂರಿನ ವೆಚ್ಚ ರೂ.5000 ದೂರುದಾರರಿಗೆ ಪಾವತಿಸಬೇಕು ಎಂದು ಆದೇಶಿದೆ.

ಪ್ರಕರಣದಲ್ಲಿ ವಿಮಾ ಕಂಪನಿಯು ಹಾಜರಾಗಿ ತಕರಾರು ಸಲ್ಲಿಸುತ್ತಾ ಅಪಘಾತವಾದ 6 ದಿನದ ನಂತರ ಪ್ರಕರಣವನ್ನು ದಾಖಲಿಸಿ ಪಾಲಿಸಿ ನಿಬಂಧನೆಗಳನ್ನು ಉಲ್ಲಂಘಿಸಿದ ಕಾರಣ ವಿಮಾ ಮೊತ್ತ ಪಾವತಿಸಿರುವುದಿಲ್ಲವೆಂದು ಸರ್ಮಥಿಸಿಕೊಂಡಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande