ಗದಗ ಬೆಟಗೇರಿ ಅವಳಿ ನಗರದ ಜನರ ಗಮನಕ್ಕೆ
ಗದಗ, 24 ಆಗಸ್ಟ್ (ಹಿ.ಸ.) : ಆ್ಯಂಕರ್ : ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿ ಮಾಲಿಕರ ಗಮನಕ್ಕೆ ಈ ಆಸ್ತಿ ಮೊಟೇಶನ್ ಅಡಿಯಲ್ಲಿ ಬರುವ ಅರ್ಜಿಗಳನ್ನು ಭೌತಿಕವಾಗಿ ಅರ್ಜಿಗಳನ್ನು ಸ್ವಿಕರಿಸುವುದಿಲ್ಲ. ಇ ಆಸ್ತಿ ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ ಮತ್ತು ಕರ್ನಾಟಕ ಓನ್ ಕೇಂದ್ರಗಳ ಮೂಲಕ ಮಾತ
ಫೋಟೋ


ಗದಗ, 24 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿ ಮಾಲಿಕರ ಗಮನಕ್ಕೆ ಈ ಆಸ್ತಿ ಮೊಟೇಶನ್ ಅಡಿಯಲ್ಲಿ ಬರುವ ಅರ್ಜಿಗಳನ್ನು ಭೌತಿಕವಾಗಿ ಅರ್ಜಿಗಳನ್ನು ಸ್ವಿಕರಿಸುವುದಿಲ್ಲ.

ಇ ಆಸ್ತಿ ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ ಮತ್ತು ಕರ್ನಾಟಕ ಓನ್ ಕೇಂದ್ರಗಳ ಮೂಲಕ ಮಾತ್ರ ಇ-ಆಸ್ತಿ (ನಮೂನೆ-03) ಮತ್ತು ಮೊಟೇಶನ್ ಖಾತಾ ಬದಲಾವಣೆ ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸತಕ್ಕದ್ದು.

ಆನ್ ಲೈನ್ ಮೂಲಕ ಬರುವ ಅರ್ಜಿಗಳನ್ನು ಮಾತ್ರಪರಿಗಣಿಸಲಾಗುವುದು ಮತ್ತು ಡಾಟಾ ಎಂಟ್ರಿ ಆಪರೇಟರ್ ಕಡೆಯಲ್ಲಿ ಸಾರ್ವಜನಿಕರು ಯಾವುದೆ ಅರ್ಜಿಯನ್ನು ನೀಡಬಾರದು ನೀಡಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಗರಸಭೆಯು ಯಾವುದೆ ಮಧ್ಯವರ್ತಿಗಳು ಹೊಂದಿರುವುದಿಲ್ಲಾ ಮತ್ತು ಪ್ರೋತ್ಸಾಹಿಸುವುದಿಲ್ಲ. ಮಧ್ಯವರ್ತಿಗಳು ಕಂಡುಬಂದರೆ ಸೂಕ್ತ ಕ್ರಮ ಜರಿಗಿಸಲಾಗುವುದು ಎಂದು ಈ ಮೂಲಕ ತಿಳಿಯಪಡಿಸಿದೆ.

ಕಾರಣ ಸಾರ್ವಜನಿಕರು ಮತ್ತು ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಿ ನಿಗದಿತ ಅವಧಿಯಲ್ಲಿ ಸೇವೇಯನ್ನು ಪಡೆಯಲು ತಿಳಿಸಿದೆ ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande