ಕೋಲಾರ, ೨೪ ಆಗಸ್ಟ್ (ಹಿ.ಸ) :
ಆ್ಯಂಕರ್ : ಜಿಲ್ಲಾ ಯಾದವ ಸಂಘದ ಆಶ್ರಯದಲ್ಲಿ ನಗರದ ಟೇಕಲ್ ರಸ್ತೆಯ ಯಾದವ ಸಮುದಾಯ ಭವನದ ಮುಂಭಾಗ ಆರಂಭಗೊ0ಡ ಶ್ರೀಕೃಷ್ಣಜನ್ಮಾಷ್ಟಮಿ ಭವ್ಯ ಮೆರವಣಿಗೆಗೆ ಬೆಂಗಳೂರು ಪೂರ್ವ ಡಿಸಿಪಿ ದೇವರಾಜ್ ಹಾಗೂ ಜೆಡಿಎಸ್ ಮುಖಂಡ ಸಿ.ಎಂಆರ್.ಶ್ರೀನಾಥ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಪಿ ದೇವರಾಜ್, ಶ್ರೀಕೃಷ್ಣನ ಭಗವದ್ಗೀತೆ ಇಡೀ ವಿಶ್ವಕ್ಕೆ ಪ್ರೇರಣೆಯಾಗಿದೆ, ಧರ್ಮವನ್ನು ಉಳಿಸುವ ಅಧರ್ಮವನ್ನು ಮುಗಿಸುವ ಸಂದೇಶದ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಸಾಕಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜಕ್ಕೆ ಕಂಟಕರಾಗಿದ್ದ ರಾಕ್ಷಸರನ್ನು ಮುಗಿಸಿದ ಶ್ರೀಕೃಷ್ಣ ಮಹಿಳೆಯರು,ಹೆಣ್ಣು ಮಕ್ಕಳ ರಕ್ಷಕನಾಗಿ ಅವರ ಆರಾಧಕನಾಗಿ ಕಂಡು ಬಂದಿದ್ದಾನೆ, ಸಮಾಜದಲ್ಲಿ ದುಷ್ಟ ಶಕ್ತಿಗಳ ಅಟ್ಟಹಾಸ ಮುಗಿಲು ಮುಟ್ಟಿದಾಗ ತಾನೇ ಅವತರಿಸುವುದಾಗಿ ಹೇಳಿದ್ದು, ಕೃಷ್ಣನ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ. ಜಿಲ್ಲೆಯಲ್ಲಿ ಹೈನೋದ್ಯಮವೇ ಜೀವಾಳವಾಗಿದೆ, ಅದರಲ್ಲೂ ಯಾದವ ಸಮುದಾಯ ಪೂರ್ಣವಾಗಿ ಹೈನುಗಾರಿಕೆಯನ್ನೇ ನಂಬಿದೆ, ಗೋವನ್ನು ಗೋಮಾತೆಯೆಂದು ಪೂಜಿಸುವ ಸಂಸ್ಕೃತಿ ಮೈಗೂಡಿಸಿಕೊಂಡಿದೆ ಎಂದು ತಿಳಿಸಿ, ಹೈನೋದ್ಯಮವೇ ಇಂದು ಕೋಲಾರ ಜಿಲ್ಲೆಯ ಜನರ ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ ಎಂದರು.
ಗೋವಿನ ಸಗಣಿಗೆ ಹಿಂದೂ ಸಂಸ್ಕೃತಿಯಲ್ಲಿ ಪೂಜ್ಯ ಭಾವನೆ ಇದೆ, ಇಂದು ಮತ್ತೆ ನಾವು ಸಾವಯವ ಕೃಷಿಯ ಕಡೆ ಬರುತ್ತಿದ್ದೇವೆ, ಅದಕ್ಕೆ ಗೋವುಗಳು ಬೇಕು, ಅದರ ಸಗಣಿ, ಗಂಜಲವೂ ಅಗತ್ಯವಿದೆ ಎಂದು ತಿಳಿಸಿ ಗೋವುಗಳನ್ನು ನಂಬಿದ ಯಾದವ ಸಮುದಾಯ ಶೈಕ್ಷಣಿವಾಗಿ ಸಾಧನೆ ಮಾಡಲಿ ಎಂದು ಹಾರೈಸಿದರು.
ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ಮಾತನಾಡಿ, ಸಮಾಜಕ್ಕೆ ಭಗವದ್ಗೀತೆಯಂತಹ ಮಹಾನ್ ಗ್ರಂಥ ನೀಡುವ ಮೂಲಕ ಸಂಸ್ಕಾರದ ಪಾಠ ಹೇಳಿಕೊಟ್ಟ ಶ್ರೀಕೃಷ್ಣ ಪರಮಾತ್ಮ ಎಲ್ಲರಿಗೂ ದೇವರೇ ಎಂದು ತಿಳಿಸಿ, ಕೃಷ್ಣಜಯಂತಿಯ ಮೂಲಕ ಜಿಲ್ಲೆಯಲ್ಲಿ ಒಳ್ಳೆಯ ಮಳೆ,ಬೆಳೆಯಾಗಲಿ ಸಮಾಜದಲ್ಲಿ ಇಂದಿಗೂ ಸಂಸ್ಕಾರ, ಸ0ಸ್ಕೃತಿ ಉಳಿದಿದೆ ಎಂದರೆ ಅದಕ್ಕೆ ನಮ್ಮಲ್ಲಿನ ದೇವರ ಮೇಲಿನ ಭಕ್ತಿಯೇ ಕಾರಣವಾಗಿದೆ, ಕೃಷ್ಣನ ಮೇಲಿನ ಭಕ್ತಿ ಎಂತದ್ದು ಎಂಬುದಕ್ಕೆ ಕನಕದಾಸರಿಗೆ ಮೂರ್ತಿಯೇ ಹಿಂದಿರುಗಿ ನೀಡಿದ ದರ್ಶನ ಎಂತದ್ದು ಎಂಬ ಅರಿವಿದೆ. ಗೋಮಾತೆಯನ್ನು ರಕ್ಷಿಸದಿದ್ದರೆ ನಮ್ಮ ಮುಂದಿನ ಬದುಕು ಕಷ್ಟಕರವಾಗಲಿದೆ ಎಂದು ಎಚ್ಚರಿಸಿದ ಅವರು, ರೈತರಿಗೆ ದಾರಿದೀಪವಾಗಿದ್ದ ಎತ್ತುಗಳು ಇಂದು ಕಡಿಮೆಯಾಗಿವೆ, ಸಣ್ಣಪುಟ್ಟ ಬಡ ರೈತರು ಎತ್ತು ಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ, ಆಧುನಿಕತೆಯ ನಡುವೆ ನಮ್ಮ ಸಂಸ್ಕೃತಿ ಉಳಿಯಬೇಕು ಎಂದರು.
ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ ಮಾತನಾಡಿ, ಸಮುದಾಯ ಒಗ್ಗೂಡದಿದ್ದರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ, ಶ್ರೀಕೃಷ್ಣ ಜಯಂತಿ ಯಾದವ ಸಮುದಾಯದ ಸಂಘಟನೆಗೆ ಸಾಕಾರವಾಗಲಿ . ಯಾದವ ಸಮುದಾಯದಲ್ಲಿ ಸಂಘಟನೆ ಕೊರತೆ ಇದೆ, ಸಮುದಾಯದ ಯುವಕರು ಮುಂಚೂಣಿಗೆ ಬರಬೇಕು ಸಂಘಟನೆಯನ್ನು ಬಲಗೊಳಿಸಬೇಕು ಎಂದು ಕಿವಿಮಾತು ಹೇಳಿ, ಭಿನ್ನಮತ ತೊರೆದು ಎಲ್ಲರೂ ಒಂದಾಗೋಣ ಸಮುದಾಯಕ್ಕಾಗುತ್ತಿರುವ ಅನ್ಯಾಯದ ವಿರುದ್ದ ಹೋರಾಡೋಣ ಗೋವುಗಳನ್ನು ಸಾಕುವ ಯಾದವರು ಒಗ್ಗಟ್ಟಿನಿಂದ ಇರಬೇಕು, ನಮಗೆ ಕೃಷ್ಣನೇ ಆದರ್ಶ ಮೂರ್ತಿಯಾಗಿದ್ದಾನೆ, ಹಿಂದುಳಿದ ವರ್ಗಗಳು ಒಂದಾಗದಿದ್ದರೆ ರಾಜಕೀಯ ಅಧಿಕಾರದಿಂದಲೂ ವಂಚಿತರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶ್ರೀಕೃಷ್ಣನ ಭವ್ಯ ಮೆರವಣಿಗೆಗೆ ಡೊಳ್ಳು ಕುಣಿತ,ಕೇರಳದ ತಂಡೆ ವಾದ್ಯ, ಗಾರುಡಿ ಗೊಂಬೆ, ಹಾಸ್ಯ ಕಲಾವಿದರು, ವೀರಗಾಸೆ ಸೇರಿದಂತೆ ಕಲಾ ತಂಡಗಳು ಮೆರಗು ನೀಡಿದ್ದವು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್, ಮುಖಂಡರಾದ ಬಣಕನಹಳ್ಳಿ ನಟರಾಜ್, ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡ, ವಿವಿಧ ಸಮುದಾಯದಗಳ ಮುಖಂಡರಾದ ವರದೇನಹಳ್ಳಿ ವೆಂಕಟೇಶ್,ವಕ್ಕಲೇರಿ ರಾಜಪ್ಪ, ಗಂಗಮ್ಮನಪಾಳ್ಯ ರಾಮಯ್ಯ, ಯಾದವ ಸಂಘದ ನಿಕಟಪೂರ್ವ ಅಧ್ಯಕ್ಷ ಗೋಕುಲ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಅಮರನಾಥ್, ರಾಜ್ಯಕಾರ್ಯಕಾರಿ ಸದಸ್ಯ ಶ್ರೀನಿವಾಸಯಾದವ್, ಯಾದವ ಸಮುದಾಯದ ಮುಖಂಡರಾದ ಮುಕ್ಕಡ್ ವೆಂಕಟೇಶ್, ಪಿಡಿಒ ನಾಗರಾಜ್, ವಕೀಲ ದಿವಾಕರ್ ಯಾದವ್, ಮುನಿವೆಂಕಟಯಾದವ್, ಮಣಿ, ಅಮ್ಮೇರಹಳ್ಳಿ ಮಂಜುನಾಥ್,ಚಲಪತಿ,ಡಾ.ಶAಕರಪ್ಪ,ಬ0ಗಾರರಪೇಟೆ ಶ್ರೀನಿವಾಸ್,ಕೆಜಿಎಫ್ ಉಮೇಶ್,ಮಾಲತಿ,ಕಿಶೋರ್,ನರೇಶ್, ಪ್ರಶಾಂತ್,ಕೋಲಾರಮ್ಮ ಡ್ರೆöÊವಿಂಗ್ ಶಾಲೆಯ ನಿತೀಶ್ ಯಾದವ್,ಜೀವನ್ ಯಾದವ್, ಮುಳ್ಳಹಳ್ಳಿ ಮಂಜುನಾಥ್ ಸೇರಿದಂತೆ ಕೋಲಾರ ನಗರ,ಕೊಂಡರಾಜನಹಳ್ಳಿ, ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಯಾದವ ಸಮುದಾಯದ ಮುಖಂಡರು ಮೆರವಣಿಗೆಯಲ್ಲಿ ಹಾಜರಿದ್ದರು.
ಚಿತ್ರ : ಕೋಲಾರದಲ್ಲಿ ಜಿಲ್ಲಾ ಯಾದವ ಸಂಘದ ಸಹಯೋಗದಲ್ಲಿ ನಡೆದ ಶ್ರೀಕೃಷ್ಣಜಯಂತಿಯ ಸ್ಥಬ್ದಚಿತ್ರಗಳು,ಪಲ್ಲಕ್ಕಿಗಳ ಭವ್ಯ ಮೆರವಣಿಗೆಗೆ ಡಿಸಿಪಿ ದೇವರಾಜ್, ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ಚಾಲನೆ ನೀಡಿದರು. ಜಿಲ್ಲಾ ಯಾದವ ಸಂಘದ ಅಧ್ಯಕ್ಷ ವಕ್ಕಲೇರಿ ನಾರಾಯಣಸ್ವಾಮಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್