ಸಂಘಟಿತ ಕಾರ್ಮಿಕರ ಕುಂದು ಕೊರತೆ ನಿವಾರಣಾ ಸಭೆ
ಶಿವಮೊಗ್ಗ, 24 ಆಗಸ್ಟ್ (ಹಿ.ಸ.) : ಆ್ಯಂಕರ್ : ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಅಗತ್ಯತೆಗಳನ್ನು ಪೂರೈಸುವ ಉದ್ದೇಶದಿಂದ ಮತ್ತು ಕಾರ್ಮಿಕರಿಗೆ ಲಭ್ಯವಿರುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಆ.27 ರಂದು ಮಹಾನಗರಪಾಲಿಕೆ ಪರಿಷತ್ ಸಭಾಂ
ಸಂಘಟಿತ ಕಾರ್ಮಿಕರ ಕುಂದು ಕೊರತೆ ನಿವಾರಣಾ ಸಭೆ


ಶಿವಮೊಗ್ಗ, 24 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಅಗತ್ಯತೆಗಳನ್ನು ಪೂರೈಸುವ ಉದ್ದೇಶದಿಂದ ಮತ್ತು ಕಾರ್ಮಿಕರಿಗೆ ಲಭ್ಯವಿರುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಆ.27 ರಂದು ಮಹಾನಗರಪಾಲಿಕೆ ಪರಿಷತ್ ಸಭಾಂಗಣ ಗಾಂಧಿ ಪಾರ್ಕ್ ಎದುರು, ಬಿ.ಹೆಚ್. ರಸ್ತೆ ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ.

ಭಾರತ ದೇಶದಲ್ಲಿ 2023 ರಿಂದ ಪ್ರತಿ ಜಿಲ್ಲೆಯಲ್ಲಿ ಪ್ರತಿ ತಿಂಗಳ 27ರಂದು ನೆಡೆಸಲಾಗುತ್ತದೆ. ಇದು ಸದಸ್ಯರ ಮಾಹಿತಿ ಮತ್ತು ವಿನಿಮಯಕ್ಕಾಗಿ ಕುಂದು ಕೊರತೆ ನಿವರಣಾ ವೇದಿಕೆಯಾಗಿ ಕಾರ್ಯನಿರ್ವಹಿಸುವ ಉದ್ಯೋಗದಾತರರು ಮತ್ತು ಉದ್ಯೋಗಿಗಳಿಗೆ ಒಳಗೊಳ್ಳುವ, ಒಗ್ಗೂಡಿಸುವ, ವಿಶಾಲ ಆಧಾರಿತ ಭಾಗವಹಿಸಿವಿಕೆಯ ಅರಿವು ಮತ್ತು ಔಟ್‌ರೀಜ್ ಕಾರ್ಯಕ್ರಮವಾಗಿದೆ.

ಉದ್ಯೋಗದಾತರು ಮತ್ತು ಉದ್ಯೋಗಿಗಳು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1. ಗಂಟೆಯವರೆಗೆ, ಪಿಂಚಣಿದಾರರು ಮಧ್ಯಾಹ್ನ 2.30 ಗಂಟೆಯಿಂದ 4.00 ಗಂಟೆಯ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಕಂದು ಕೊರತೆಗಳು ಇದ್ದಲ್ಲಿ ನಿವಾರಣೆ ಮಾಡಿಕೊಳ್ಳಬಹುದು ಎಂದು ಪ್ರಾದೇಶಿಕ ಕಚೇರಿಯ ಖಾತೆ ಅಧಿಕಾರಿ ತಿಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande