ಬಳ್ಳಾರಿ, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸಾಹಿತ್ಯದ ಕ್ಷೇತ್ರದ ಯಾವುದೇ ಪ್ರಕಾರದಲ್ಲಿ ಕೃಷಿ ನಡೆದರೂ ಛಂದಸ್ಸು - ಪ್ರಾಸ ಇರಲೇಬೇಕು ಎಂಬ ಸೂತ್ರವಿಲ್ಲ ಎಂದು ಡಿ. ನಂಜುಂಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ವೈದ್ಯರ ಸಂಘ - ಕನ್ನಡ ವೈದ್ಯ ಬರಹಗಾರರ ಆರನೇ ರಾಜ್ಯ ಸಮ್ಮೇಳನದ ಆರನೇ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ `ಕಾವ್ಯದ ಪ್ರಕಾರಗಳು ಮತ್ತು ಸಾಮಾನ್ಯ ವ್ಯಾಕರಣ ಬಳಕೆ' ವಿಷಯದ ಉಪನ್ಯಾಸ ನೀಡಿದರು.
ಗದ್ಯ, ಪದ್ಯ ಮತ್ತು ಚಂಪೂ ಕಾವ್ಯಗಳಲ್ಲಿ ಸಾಹಿತ್ಯವನ್ನು ರಚಿಸಬಹುದು. ವಾಕ್ಯವನ್ನು ಅಥವಾ ಪದ್ಯವನ್ನು ಕಟ್ಟುವ ಶೈಲಿಯನ್ನು ಕವಿ ತಿಳಿದುಕೊಂಡಿದಲ್ಲಿ ಮಾತ್ರ ಸರಳವಾದ ಸಾಹಿತ್ಯ ರಚಿಸಬಹುದು. ಕನ್ನಡದ ಖ್ಯಾತ ಕವಿಗಳು ತಮಗಿಷ್ಟವಾದ ರೀತಿಯಲ್ಲಿ ಗದ್ಯ ಮತ್ತು ಪದ್ಯದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಪ್ರಥಮ ಗದ್ಯ ಕೃತಿ ಶಿವಕೋಟ್ಯಾಚಾರ್ಯರ ವಡ್ಢಾರಾಧನೆ ಆಗಿದ್ದು, ವಾಲ್ಮೀಕಿ ರಚಿತ ರಾಮಾಯಣ, ಬೇಂದ್ರೆಯವರ ನಾಕುತಂತಿ ಕೃತಿಗಳು ಪದ್ಯದಲ್ಲಿವೆ. ಕಾವ್ಯ ರಚನೆಕಾರ ಪದಗಳ ಪೆÇೀಣಿಸುವಿಕೆಯನ್ನು ಚೆನ್ನಾಗಿ ತಿಳಿದುಕೊಂಡಲ್ಲಿ ಅತ್ಯುತ್ತಮವಾದ ಸಾಹಿತ್ಯವನ್ನು ರಚಿಸಬಲ್ಲವರಾಗುತ್ತಾರೆ ಎಂದರು.
ಡಾ. ಗೋವಿಂದ ಹೆಗಡೆ ಅವರು ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉಸ್ತುವಾರಿ ಕಿರಣ್ ಪಟೇಲ್. ನಿರ್ವಹಣೆ ಡಾ. ಅಂತಾಚಾರಿ.
ಎರಡನೇ ದಿನದ ವೈದ್ಯ ಕವಿ ಗೋಷ್ಠಿಯಲ್ಲಿ ಡಾ. ದಸ್ತಗೀರ್ ಸಾಬ್ ದಿನ್ನಿ ಗೋಷ್ಠಿಯ ಅಧ್ಯಕ್ಷತೆವಹಿಸಿದ್ದರು.
ಡಾ. ಸುಮಾ ಗುಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಡಾ. ಇಂದಿರಾ ದೊಡ್ಡಬಳ್ಳಾಪುರ ಇವರು ವೇದಿಕೆಯ ಉಸ್ತುವಾರಿಯನ್ನು ನಿರ್ವಹಿಸಿದರು.
ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ವಿ.ವಿ. ಚಿನಿವಾಲರ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಡಾ. ವೀರಭದ್ರಯ್ಯ ಟಿ.ಎ., ಡಾ. ಸೂರಿರಾಜು, ಡಾ. ಗಡ್ಡಿ ದಿವಾಕರ್, ಡಾ. ದಿನೇಶ್ ಗುಡಿ, ಡಾ. ದಿವ್ಯ ಕೆ.ಎನ್. ಅವರು ವೇದಿಕೆಯಲ್ಲಿದ್ದರು.
ಎರಡು ದಿನಗಳ ಕಾಲ ನಡೆದ ಕನ್ನಡ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನ 2025 ವೈದ್ಯ ಸಾಹಿತ್ಯ ಜನಪರ ಸಾಹಿತ್ಯ ಸಮ್ಮೇಳನದಲ್ಲಿ 300 ಕ್ಕೂ ಹೆಚ್ಚು ವೈದ್ಯರು ಸಕ್ರಿಯವಾಗಿ ಪಾಲ್ಗೊಂಡು ಹೊಸ ಚಿಂತನೆಯೊಂದಿಗೆ ಸಾಕಷ್ಟು ಕ್ರಿಯಾಶೀಲತೆಯನ್ನು ಅಳವಡಿಸಿಕೊಳ್ಳುವಲ್ಲಿ ಪಾಲ್ಗೊಂಡಿದ್ದರು.
ಡಾ. ಅರವಿಂದ್ ಪಟೇಲ್ ಅವರು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್