ಕೋಲಾರ, ೨೪ ಆಗಸ್ಟ್ (ಹಿ.ಸ) :
ಆ್ಯಂಕರ್ : ವಿಧಾನ ಸಭಾ ಕ್ಷೇತ್ರದ ನರಸಾಪುರ ಭಾಗದಲ್ಲಿ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಶಾಶ್ವತವಾದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಬಾಕಿ ಉಳಿದ ಕಾಮಗಾರಿಗಳು ಆದಷ್ಟು ಬೇಗ ಪೂರ್ಣಗೊಳ್ಳಲಿವೆ ನರಸಾಪುರದ ಅಭಿವೃದ್ಧಿಗೆ ೩೦ ಕೋಟಿ ಅನುದಾನ ನೀಡಲಾಗಿದೆ ಅಭಿವೃದ್ಧಿ ಕಾರ್ಯಕ್ರಮಗಳೇ ವಿರೋಧಿಗಳಿಗೆ ಉತ್ತರ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ಭಾನುವಾರ ಸುಮಾರು ೧ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಈಗಾಗಲೇ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿಗೆ ೧ ಕೋಟಿ ಅನುದಾನ ಬಿಡುಗಡೆ ಮಾಡಿ ಕೆಲಸ ನಡೆಯತ್ತಿದೆ ಇನ್ನೊಂದು ಕೋಟಿಗೆ ಅನುಮೋದನೆ ಸಹ ಸಿಕ್ಕಿದೆ ಅದು ಸಹ ಬಿಡುಗಡೆಯಾಗುತ್ತದೆ ಮುಂದೆ ಇನ್ನೊಂದು ಕೋಟಿ ಅನುದಾನಕ್ಕೆ ಬೇಡಿಕೆ ಇಡಲಾಗಿದೆ ಅದು ಬಂದರೆ ನರಸಾಪುರ ಗ್ರಾಮದಲ್ಲಿ ಎಲ್ಲಾ ಅಭಿವೃದ್ಧಿ ಕೆಲಸಗಳು ಪೂರ್ಣಗೊಳ್ಳಲಿವೆ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವ ಜೊತೆಗೆ ಯಾವುದೇ ದೂರು ಸಹ ಬರಬಾರದ ರೀತಿಯಲ್ಲಿ ಕೆಲಸ ಬೇಗ ಮುಗಿಸಬೇಕು ಎಂದರು.
ಗ್ರಾಮದ ಯುವಕರು ವಾಲಿಬಾಲ್ ಕೋರ್ಟ್ ಗೆ ಬೇಡಿಕೆ ಇಟ್ಟರು ಆಗ ಮಧ್ಯಪ್ರವೇಶಿಸಿದ ಶಾಸಕರು ನೋಡಿ ಯುವಕರು ದೇಶದ ಬೆನ್ನೆಲುಬು ಅವರ ಕ್ರೀಡೆಯನ್ನು ಪೋತ್ಸಾಹ ಮಾಡಬೇಕು ಆದರೆ ಇವತ್ತು ಇರುವ ಸರ್ಕಾರಿ ಜಾಗವು ಬೇರೆ ಬೇರೆ ಕಾರಣಗಳಿಗಾಗಿ ಕಛೇರಿಗಳಿಗೆ ಬಳಸಿಕೊಳ್ಳಲಾಗಿದೆ ಅಭಿವೃದ್ಧಿ ಮಾಡಕ್ಕೆ ಹೋದರೆ ಕೋರ್ಟ್ ನಿಂದ ತಡೆಯಾಜ್ಞೆಯನ್ನು ತಂದಿದ್ದಾರೆ ಯುವಕರು ಸಹ ಅಭಿವೃದ್ಧಿಗೆ ಬೆಂಬಲಿಸುವ0ತೆ ಮನವಿ ಮಾಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ನರಸಾಪುರ ಗ್ರಾಪಂ ಅಧ್ಯಕ್ಷ ಕುಮಾರ್, ಜಿಪಂ ಮಾಜಿ ಸದಸ್ಯ. ನಾಗನಾಳ ಸೋಮಣ್ಣ, ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ಡಾ ನಾರಾಯಣಸ್ವಾಮಿ ಮುಖಂಡರಾದ ಮೈಲಾಂಡಹಳ್ಳಿ ಮುರಳಿ ಎಂ.ಟಿ.ಬಿ ಶ್ರೀನಿವಾಸ್, ಚಂದ್ರ ಮೋಹನ್, ನವೀನ್, ಗೋಪಿ, ವೀರೇಂದ್ರ ಪಾಟೀಲ್, ಜೈಭೀಮ್ ಪ್ರಕಾಶ್, ಚಿನ್ನಾಪುರ ನಾರಾಯಣಸ್ವಾಮಿ, ನದೀಂ, ವನಜಾ, ಸಯೀದ್ ಪಾಷ, ಪಿಡಿಒ ಮುನಿರಾಜು, ಗುತ್ತಿಗೆದಾರ ಗಿರೀಶ್ ಗೌಡ ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ನರಸಾಪುರದಲ್ಲಿ ಒಂದು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್