ಬಳ್ಳಾರಿ, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನವನ್ನು ಕಲಾಭಿಮಾನಿಗಳು ಪ್ರೋತ್ಸಾಹಿಸಿದಾಗಲೇ ಕಲೆ ಉಳಿದು - ಬೆಳೆಯುತ್ತದೆ ಎಂದು ಜೆ.ಟಿ. ಪೌಂಡೇಷನ್‍ನ ಅಧ್ಯಕ್ಷ, ನ್ಯಾಯವಾದಿ ಜೋಳದರಾಶಿ ತಿಮ್ಮಪ್ಪ ಅವರು ತಿಳಿಸಿದ್ದಾರೆ
ಗುಗ್ಗರಹಟ್ಟಿಯ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಶಿವದೀಕ್ಷಾ ಮಂದಿರದಲ್ಲಿ `ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್’ ಏರ್ಪಡಿಸಿದ್ದ `ನಮ್ಮ ಹಬ್ಬ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು
ತೊಗಲುಗೊಂಬೆ ಪ್ರದರ್ಶನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ - ಪ್ರಭಾವದಲ್ಲಿ ತೊಂಗಲುಗೊಂಬೆ ಸೊರಗುತ್ತಿದೆ. ಕಾರಣ ಕಲಾಭಿಮಾನಿಗಳು ಈ ಕಲಾಪ್ರಕಾರವನ್ನು ಪ್ರೋತ್ಸಾಹಿಸಬೇಕು ಎಂದರು.
ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ನಾವು ಕಲೆಯನ್ನು ಉಳಿಸಿ ಬೆಳೆಸಬೇಕು. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಸತತ ಪ್ರಯತ್ನ ಮತ್ತು ಶ್ರಮ ಅಗತ್ಯವಾಗಿದೆ ಎಂದರು.
ಕಲಾವಿದರಾದ ಎಸ್.ಆರ್.ಕೆ. ಜಿಲಾನ್ ಭಾμÁ ಮತ್ತು ಶ್ರೀ ಶ್ರೀಶೈಲ ಬ್ರಮರಾಂಭ ಮಲ್ಲಿಕಾರ್ಜುನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ರಾಜಶೇಖರಗೌಡ ಅವರು ವೇದಿಕೆಯಲ್ಲಿದ್ದರು.
ಎರ್ರಿಸ್ವಾಮಿ ತೊಗಲುಗೊಂಬೆ ಕಲಾಮೇಳ ಟ್ರಸ್ಟ್‍ನ ಅಧ್ಯಕ್ಣ ವೈ. ಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆ.ಹೊನ್ನೂರು ಸ್ವಾಮಿ ಮತ್ತು ತಂಡ `ಬಾ ಮರಳಿ ಶಾಲೆಗೆ’ ಶೀರ್ಷಿಕೆಯ ತೊಗಲುಗೊಂಬೆ ಪ್ರದರ್ಶನ ನಡೆಯಿತು.
ಕುಮಾರಿ ಪ್ರತಿಕ್ಷಾ ಮತ್ತು ತಂಡದವರಿಂದ ಜಾನಪದ ನೃತ್ಯ ಪ್ರದರ್ಶನ ಮಾಡಿತು. ಕುಮಾರಿ ಕೆ. ನೇಹ ಪ್ರಾರ್ಥನೆ ಸಲ್ಲಿಸಿದರು. ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ಕಾರ್ಯದರ್ಶಿ ರೇಖಾಪ್ರಭು ಅವರು ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್