ಬೆಂಗಳೂರು, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಪ್ರಕರಣದಲ್ಲಿ ಅಮಾಯಕ ಮುಸುಕುದಾರಿ ಚಿನ್ನಯ್ಯನನ್ನು ಬಲಿಕೊಡಲಾಗುತ್ತಿದೆ ಎಂದು ಮಾಜಿ ಶಾಸಕ ಪಿ. ರಾಜೀವ್ ಆರೋಪಿಸಿದ್ದಾರೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುತ್ತಮುತ್ತ ಇರುವ ಎಡಪಂಥೀಯ ಆಲೋಚನೆ ಹೊಂದಿದವರೇ ಈ ಷಡ್ಯಂತ್ರ ಮಾಡಿದ್ದಾರೆ. ಮುಖ್ಯಮಂತ್ರಿ ಕಾರ್ಯಾಲಯದವರೇ ಇದರಲ್ಲಿ ಶಾಮೀಲಾಗಿದ್ದಾರೆ. ದೆಹಲಿಯಲ್ಲೇ ಕುಳಿತು ಈ ಸಂಚು ರೂಪಿಸಲಾಗಿದೆ. ಇದನ್ನು ಬಹಿರಂಗಗೊಳಿಸಲು ಎನ್‌ಐಎ ತನಿಖೆ ಅಗತ್ಯ ಎಂದರು.
ಎಸ್ಐಟಿ ಮುಸುಕುದಾರಿಯನ್ನು ವಿಚಾರಣೆ ಮಾಡದೇ ಮೊದಲು ಗುಂಡಿ ತೋಡಲು ಯಾಕೆ ಆದೇಶ ನೀಡಿದರು? ಬಿಎನ್‌ಎಸ್ ಕಾಯ್ದೆಯಂತೆ ವಿಚಾರಣೆ ಮಾಡಬೇಕಿತ್ತು. ಗುಂಡಿ ತೆಗೆಸೋದು ಪೊಲೀಸರ ಕೆಲಸವಲ್ಲ, ಕೂಲಿ ಕೊಟ್ಟು ಕರೆದುಕೊಂಡು ಬಂದವರನ್ನು ಈಗ ಕೂಲಿ ಕೊಟ್ಟು ಜೈಲಿಗೆ ಕಳಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa