ಡಿಜಿಆರ್ ವತಿಯಿಂದ ನಾನಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ
ಚಿತ್ರದುರ್ಗ, 24 ಆಗಸ್ಟ್ (ಹಿ.ಸ.) : ಆ್ಯಂಕರ್ : ಡಿಜಿಆರ್(ಡೈರೆಕ್ಟೋರೆಟ್ ಜನರಲ್ ರಿಸೆಟ್ಲೆಮೆಂಟ್) ವತಿಯಿಂದ ನಿವೃತ್ತ ಸೇನಾ ಅಧಿಕಾರಿಗಳು ಹಾಗೂ ಜೆಸಿಓ ಹಾಗೂ ಇತರೆ ರ್ಯಾಂಕ್‍ನ ಮಾಜಿ ಸೈನಿಕರಿಗೆ ನಾನಾ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ನಿವೃತ್ತಿ ಅಧಿಕಾರಿಗಳಗೆ ಶೇ.60
ಡಿಜಿಆರ್ ವತಿಯಿಂದ ನಾನಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ


ಚಿತ್ರದುರ್ಗ, 24 ಆಗಸ್ಟ್ (ಹಿ.ಸ.) :

ಆ್ಯಂಕರ್ : ಡಿಜಿಆರ್(ಡೈರೆಕ್ಟೋರೆಟ್ ಜನರಲ್ ರಿಸೆಟ್ಲೆಮೆಂಟ್) ವತಿಯಿಂದ ನಿವೃತ್ತ ಸೇನಾ ಅಧಿಕಾರಿಗಳು ಹಾಗೂ ಜೆಸಿಓ ಹಾಗೂ ಇತರೆ ರ್ಯಾಂಕ್‍ನ ಮಾಜಿ ಸೈನಿಕರಿಗೆ ನಾನಾ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ನಿವೃತ್ತಿ ಅಧಿಕಾರಿಗಳಗೆ ಶೇ.60 ರಷ್ಟು ಶುಲ್ಕ ವಿನಾಯಿತಿ ಹಾಗೂ ಮಾಜಿ ಸೈನಿಕರಿಗೆ ಯಾವುದೇ ಶುಲ್ಕ ಇರುವುದಿಲ್ಲ.

60 ವರ್ಷ ಒಳಗಿನ ನಿವೃತ್ತಿ ಹೊಂದಿ 3 ವರ್ಷ ಮೀರದ ಸೈನಿಕ ಅಧಿಕಾರಿಗಳು, 5 ವರ್ಷ ಮೀರದ ಮಾಜಿ ಸೈನಿಕರು ಅರ್ಜಿಸಲ್ಲಿಸಲು ಅರ್ಹರಿರುತ್ತಾರೆ.

ಆಸಕ್ತರು ಶಿವಮೊಗ್ಗದಲ್ಲಿರುವ ಸೈನಿಕ ಕಲ್ಯಾಣ ಮತ್ತು ಪುರ್ನಸತಿ ಇಲಾಖೆ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182220925ಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande