ಬಳ್ಳಾರಿ, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳ ಪ್ರಕರಣವು ದಿನೇ ದಿನೇ ತಿರುವುಗಳನ್ನು ಪಡೆಯುತ್ತಲೇ ಇದೆ. ಸೌಜನ್ಯ ಅಸಹಜ ಸಾವಿನ ಪ್ರಕರಣದಲ್ಲಿ ಯೂಟ್ಯೂಬರ್ ನಿಂದ ಬಳ್ಳಾರಿ ಹೆಸರು ತಳಕು ಹಾಕೊಕೊಂಡಿತ್ತು. ಈಗ, ಅದೇ ಯೂಟ್ಯೂಬರ್ ನಿಂದ ಬಳ್ಳಾರಿ ಮತ್ತೊಮ್ಮೆ ತಳಕು ಹಾಕಿಕೊಂಡಿದೆ.
ಯೂಟ್ಯೂಬರ್ ಎಂ.ಡಿ. ಸಮೀರ್ 2011ರವರೆಗೂ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಿಹಟ್ಟಿ ಗ್ರಾಮದಲ್ಲಿ ಸಹೋದರಿ ಮತ್ತು ಭಾವನೆ ಜೊತೆಯಲ್ಲಿ ವಾಸವಾಗಿದ್ದನು.
ಆತನು, ಬಳ್ಳಾರಿಯಿಂದ ಬೆಂಗಳೂರಿಗೆ ಸ್ಥಳಾಂತರವಾದ ನಂತರ ಆಧಾರ್ ಕಾರ್ಡ್ 9 ನಲ್ಲಿ ವಿಳಾಸವನ್ನು ಬದಲಾವಣೆ ಮಾಡಿಕೊಂಡಿಲ್ಲ. ಸಹಜವಾಗಿ ಆಧಾರ್ ಆಧಾರಿತವಾಗಿ ಸಂಪರ್ಕ ವಿಳಾಸವನ್ನು ಅಧಿಕೃತ ವಿಳಾಸವಾಗಿ ಪರಿಗಣಿಸಲಾಗುತ್ತದೆ. ಕಾರಣ ಸೌಜನ್ಯ ಹತ್ಯೆ ಪ್ರಕರಣ ದಲ್ಲೂ, ಧರ್ಮಸ್ಥಳದ ಬುರುಡೆ ಪ್ರಕರಣದಲ್ಲೂ ಎಂ.ಡಿ. ಸಮೀರ್ ಹೆಸರು ತಳಕು ಹಾಕಿಕೊಂಡಿರುವ ಕಾರಣ, ಆತನ ಹೆಸರಿಗೆ ಜಾರಿಯಾಗುವ ಎಲ್ಲಾ ನೋಟೀಸುಗಳು ಆತನ ಆಧಾರ್ ಕಾರ್ಡ್ 9 ವಿಳಾಸದ ಬಳ್ಳಾರಿಯ ಬಂಡಿಹಟ್ಟಿಗೂ ತಲುಪುತ್ತಿವೆ.
ಧರ್ಮಸ್ಥಳದ ಬರುಡೆ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ವಿಚಾರಣೆಗೆ ಹಾಜರಾಗಲು 'ಧರ್ಮಸ್ಥಳ ಪೊಲೀಸ್ ಠಾಣಾ 5.5 42/2025 ಕಲಂ 240, 192,353 (1) ಬಿಎನ್ಎಸ್ 2023 ಪ್ರಕರಣದ ತನಿಖೆಗೆ, ತನಿಖಾ ಅಧಿಕಾರಿ ಆಗಿರುವ ನನ್ನ ಮುಂದೆ ಹಾಜರಾಗಿರುವುದಿಲ್ಲ. ತಾವು ನಿರೀಕ್ಷಣಾ ಜಾಮೀನು ಪಡೆದಿದ್ದು ದಿನಾಂಕ 24.08.2025 ರ ಬೆಳಗ್ಗೆ 10 ಗಂಟೆಗೆ ನನ್ನ ಮುಂದೆ ವಿಚಾರಣೆಗೆ ಹಾಜರಾಗಬೇಕು' ಎಂದು ಬೆಳ್ತಂಗಡಿ ಗ್ರಾಮಾಂತರ ವೃತ್ತದ ಅಧಿಕಾರಿ ಕೆ. ನಾಗೇಶ್ ಅವರು ನೋಟೀಸ್ ಜಾರಿ ಮಾಡಿದ್ದಾರೆ.
ಈ ನೋಟೀಸನ್ನು ಬೆಳ್ತಂಗಡಿ ಪೊಲೀಸರು ಎಂ.ಡಿ. ಸಮೀರ್ ನ ಬಂಡಿಹಟ್ಟಿ ವಿಳಾಸದ ಮನೆಗೆ ಅಂಟಿಸಿ, ಫೋಟೋ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಆದರೆ, ಬೆಳ್ತಂಗಡಿ ಪೊಲೀಸರು ಈ ಮನೆಗೆ ಭೇಟಿ ನೀಡಿದಾಗ ಆ ಮನೆಯಲ್ಲಿ (ವಿಳಾಸದಲ್ಲಿ) ಯಾರೂ ಇರಲಿಲ್ಲ. ಆತನ,ಅಕ್ಕ - ಭಾವ ಧರ್ಮಸ್ಥಳ ಬುರುಡೆ ವಿವಾದದ ನಂತರ ಮನೆಯನ್ನು ಖಾಲಿ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಷ್ಟಾದ ಮೇಲೆ ಸ್ಥಳೀಯ ಪೊಲೀಸರು ಈ ಕಟ್ಟಡ ಮತ್ತು ಬಂಡಿಹಟ್ಟಿಗೆ ಬಂದು ಹೋಗುವವರ ಮೇಲೆ ತೀವ್ರ ನಿಗಾ ಇರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್