ಗದಗ, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳ ದಲ್ಲಿ ನಡೆಯುತ್ತಿರುವಂತಹ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಹೋರಾಟದಲ್ಲಿ ಬಾಗವಯಿಹಿಸಲು ಹೊರಟಿರುವ ಬಿಜೆಪಿ ಯುವಮೋರ್ಚಾ ತಂಡ , ಗದುಗಿನ ಶ್ರೀ ಪುಟ್ಟರಾಜ ಗವಾಯಿಗಳ ಮಠದಿಂದ ಗದಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಸಂತೋಷ ಅಕ್ಕಿ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕರ್ನಾಟಕದ ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಅತ್ಯಂತ ಖಂಡನೀಯ ಹಿಂದೂ ಧರ್ಮದ ಉಳಿವಿಗಾಗಿ ಹಾಗೂ ಧರ್ಮಸ್ಥಳದ ರಕ್ಷಣೆಗಾಗಿ ಹಿಂದೂ ಸಮಾಜ ಒಗ್ಗಟ್ಟು ಆಗಬೇಕು ಎಂದು ಸಂತೋಷ ಅಕ್ಕಿ ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಕ್ತಿ ಕತ್ತಿ,ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಧರ್ಮರಾಜ ಕೋಂಚಿಗೇರಿ, ಗದಗ ಜಿಲ್ಲಾ ಕಾರ್ಯಾಲಯದ ವ್ಯವಸ್ಥಾಪಕರಾದ ವಿನೋದ ಹಂಸನೂರ,ಜಿಲ್ಲಾ ಕಾರ್ಯಕರಣಿ ಸದಸ್ಯರಾದ ಸಚಿನ ಮಡಿವಾಳರ ನಿಕಟಪೂರ್ವ ರೋಣ ಮಂಡಲ ಅಧ್ಯಕ್ಷರಾದ ಶ್ರೀ ಉಮೇಶ ಚೆನ್ನುಪಾಟೀಲ್ ,ಗದಗ ನಗರಮಂಡಲದ ಪ್ರಧಾನಕಾರ್ಯದರ್ಶಿ ಬಸವರಾಜ ನರೇಗಲ್ , ಮಂಡಲ ಕಾರ್ಯಕಾರಣಿ ಸದಸ್ಯರಾದ ವಿನಾಯಕ ಹೊರಕೇರಿ , ಹಾಗೂ ಯುವಕರು ಪ್ರಯಾಣದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP