ಹೊಸಪೇಟೆ, 24 ಆಗಸ್ಟ್ (ಹಿ.ಸ.)
ಆ್ಯಂಕರ್ : ಹೊಸಪೇಟೆ ತಾಲೂಕಿನಲ್ಲಿ ಪಿಎಂಕೆಎಸ್‍ವೈ ಯೋಜನೆಯಡಿ ಸೂಕ್ಷ್ಮ ನೀರಾವರಿ ಘಟಕಕ್ಕೆ ಹಾಗೂ ಪಿಎಂಕೆಎಸ್‍ವೈ-ಪಿಡಿಎಂಸಿ ಕಾರ್ಯಕ್ರಮದಡಿ ಪಿವಿಸಿ ಪೈಪುಗಳಿಗೆ ಸಹಾಯಧನಕ್ಕಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಮನೋಹರಗೌಡ ತಿಳಿಸಿದ್ದಾರೆ.
ಕೇಂದ್ರ ಪುರಸ್ಕøತ ಪಿಎಂ ಆರ್‍ಕೆವಿವೈ ಪಿಡಿಎಂಸಿ ಸೂಕ್ಷ್ಮನೀರಾವರಿ ಕಾರ್ಯಕ್ರಮವನ್ನು ಹೊಸಪೇಟೆ ತಾಲೂಕಿನಲ್ಲಿ ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಿಂದ ಹನಿ ಮತ್ತು ತುಂತುರು ನೀರಾವರಿ ಘಟಕಗಳಿಗೆ ಸಹಾಯಧನದಡಿ ವಿತರಿಸಲಾಗುತ್ತದೆ. ಅರ್ಜಿ ಸಲ್ಲಿಸುವ ರೈತರು ನೀರಿನ ಮೂಲವನ್ನು ಹೊಂದಿರಬೇಕು. ಎಲ್ಲಾ ವರ್ಗದ ರೈತರಿಗೆ ತುಂತುರು (ಸ್ಪಿಂಕ್ಲರ್) ನೀರಾವರಿಗೆ ಸಂಬಂಧಿಸಿದಂತೆ ಗರಿಷ್ಠ 02 ಹೆಕ್ಟೇರ್ ಪ್ರದೇಶದವರಿಗೆ ಶೇ.90 ರಷ್ಟು ಸರ್ಕಾರಿ ಸಹಾಯಧನ ನೀಡಲಾಗುತ್ತದೆ.
ಸರ್ಕಾರದಿಂದ ಅನುಮೋದನೆಗೊಂಡಿರುವ ಸಂಸ್ಥೆಗಳಿಂದ ಪಡೆದಂತಹ ನೀರಾವರಿ ಘಟಕಗಳಿಗೆ ಮಾತ್ರ ಸಹಾಯಧನ ಪಡೆಯಲು ಅರ್ಹವಾಗಿರುತ್ತದೆ. ರೈತರು ನಿಗದಿತ ನಮೂನೆಯಲ್ಲಿ ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಪಹಣಿ, ಹಿಡುವಳಿ ಪತ್ರ, ಚೆಕ್ಕುಬಂದಿ, ನೀರಿನ ಮೂಲದ ಪ್ರಮಾಣಪತ್ರ, ಆಧಾರ್ ಕಾರ್ಡ್ ಪ್ರತಿ, ಭಾವಚಿತ್ರ, ಬ್ಯಾಂಕ್ ಖಾತೆಯ ವಿವರಗಳು, ಜಾತಿ ಪ್ರಮಾಣ ಪತ್ರ (ಎಸ್ಸಿ, ಎಸ್‍ಟಿ ಆಗಿದ್ದಲ್ಲಿ) ಹಾಗೂ 100 ರೂ. ರ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರದೊಂದಿಗೆ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ಹತ್ತಿರದ ರೈತ ಸಂಪರ್ಕ ಕೇಂದ್ರ ಕಮಲಾಪುರ, ಮರಿಯಮ್ಮನಹಳ್ಳಿ ಮತ್ತು ಹೊಸಪೇಟೆಯಲ್ಲಿ ವಿಚಾರಿಸಿ ಸೂಕ್ಷ್ಮ ನೀರಾವರಿ ಘಟಕಗಳನ್ನು ಪಡೆಯಬಹುದು.
ಪಿವಿಸಿ ಪೈಪುಗಳಿಗೆ ಸಹಾಯಧನ : ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಪರ್ ಡ್ರಾಪ್ ಮೋರ್ ಕ್ರಾಪ್ ಕಾರ್ಯಕ್ರಮದಡಿ ನೀರಿನ ಹಂಚಿಕೆ ಮತ್ತು ಪೂರೈಕೆ ಚಟುವಟಿಕೆಗೆ ಶೇ.50 ರಷ್ಟು ಸರ್ಕಾರ ಸಹಾಯಧನದಲ್ಲಿ ಪಿವಿಸಿ ಪೈಪುಗಳನ್ನು ವಿತರಿಸಲಾಗುತ್ತದೆ.
ಹೊಸಪೇಟೆ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಪಿವಿಸಿ ಪೈಪು ಸುತ್ತಳತೆ 2.5 ಇಂಚು ಮತ್ತು 3.00 ಇಂಚು ಲಭ್ಯವಿರುತ್ತದೆ. ಸಹಾಯಧನವನ್ನು ಪಡೆಯಲು ರೈತರು ನಿಗಧಿತ ನಮೂನೆಯಲ್ಲಿ ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಪಹಣಿ, ಹಿಡುವಳಿ ಪತ್ರ, ಚೆಕ್ಕುಬಂದಿ, ಜಾತಿ ಪ್ರಮಾಣ ಪತ್ರ ಹಾಗೂ ರೂ.100 ಛಾಪಾ ಕಾಗದದ ಮೇಲೆ ಮುಚ್ಚಳಿಕೆಯೊಂದಿಗೆ ರೈತ ಸಂಪರ್ಕ ಕೇಂದ್ರ ಮುಖ್ಯಸ್ಥರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಕಮಲಾಪುರ, ಮರಿಯಮ್ಮನಹಳ್ಳಿ, ಹೊಸಪೇಟೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿಬಹುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್