ಕೋಲಾರ, ೨೪ ಆಗಸ್ಟ್ (ಹಿ.ಸ) :
ಆ್ಯಂಕರ್ : ಕೋಲಾರ ಬಂಗಾರಪೇಟೆಯ ಮೂಲಕ ಬೆಂಗಳೂರಿನ ಕಂಟೋನ್‌ಮೆ0ಟ್ ತನಕ ಸಂಚರಿಸುವ ರೈಲಿನ ಸಂಚಾರವನ್ನು ಬೆಂಗಳೂರಿನ ಕೇಂದ್ರ ನಿಲ್ದಾಣ ಕೆಎಸ್‌ಆರ್ ತನಕ ವಿಸ್ತರಿಸುವಂತೆ ನಿತ್ಯ ಕೋಲಾರದಿಂದ ಪ್ರಯಾಣಿಸುವ ಪ್ರಯಾಣಿಕರು ಕೋಲಾರ ಸಂಸದ ಎಂ.ಮಲ್ಲೇಶ್ ಬಾಬು ರವರನ್ನು ಒತ್ತಾಯಿಸಿದ್ದಾರೆ.
ಕೋಲಾರದಲ್ಲಿ ದಿನನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಸಂಘಟನೆಯ ಸದಸ್ಯರೊಂದಿಗೆ ಲೋಕ ಸಭಾ ಸದಸ್ಯ ಮಲ್ಲೇಶ್ ಬಾಬು ರವರನ್ನು ಭೇಟಿ ಮಾಡಿ ನಗರದ ರೈಲ್ವೆ ನಿಲ್ದಾಣದಿಂದ ಬಂಗಾರುಪೇಟೆ ಮಾರ್ಗವಾಗಿ ಬೆಂಗಳೂರು ದಂಡು ನಿಲ್ದಾಣದ ತನಕ ಹೊರಡುವ ರೈಲುಗಾಡಿಯನ್ನು ಬೆಂಗಳೂರಿನ ಕೆ.ಎಸ್.ಆರ್. ನಿಲ್ದಾಣದ ತನಕ ವಿಸ್ತರಿಸುವ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತಷ್ಟು ರೈಲುಗಳ, ಸಂಚಾರ, ನಿಲ್ದಾಣದ ಸ್ವಚತೆ, ಹಾಗೂ ಇನ್ನಿತರೆ ರೈಲ್ವೆಗೆ ಸಂಬ0ಧಿಸಿದ ವಿಷಯಗಳನ್ನು ಅವರ ಗಮನಕ್ಕೆ ತಂದು, ಸುಧಾರಿಸುವಂತೆ ಮನವಿಯನ್ನು ಮಾಡಲಾಯಿತು.
ರೈಲ್ವೆ ಪ್ರಯಾಣಿಕರಾದ ಕಾವ್ಯಂ ಶ್ರೀನಿವಾಸ ಮೂರ್ತಿ, ಶ್ರೀನಿವಾಸ್, ಶೇಷಾದ್ರಿ, ಕೌಶಿಕ್,ಯಲ್ಲೇಶ್, ಸಂಕಲ್ಪ್, ಸುರೇಶ್, ಪ್ರಭಾಕರ್, ಕೋಲಾರ ಸಂಸದ ಮಲ್ಲೇಶ್ ಬಾಬು ರವರನ್ನು ಭೇಟಿಯಾಗಿ ಕೋಲಾರ ಬಂಗಾರಪೇಟೆ ರೈಲು ಸಂಚಾರವನ್ನು ಬೆಂಗಳೂರಿನ ಕೆಆರ್‌ಎಸ್ ನಿಲ್ದಾಣದ ತನಕ ವಿಸ್ತರಿಸುವಂತೆ ಮನವಿ ಮಾಡಿದರು.
ಚಿತ್ರ : ಕೋಲಾರ ಸಂಸದ ಮಲ್ಲೇಶ್‌ಬಾಬುರವರನ್ನು ಭೇಟಿಯಾಗಿ ರೈಲ್ವೆ ಪ್ರಯಾಣಿಕರು ಕೋಲಾರ ಬಂಗಾರಪೇಟೆ ರೈಲು ಸಂಚಾರವನ್ನು ಬೆಂಗಳೂರಿನ ಕೆಆರ್‌ಎಸ್ ನಿಲ್ದಾಣದ ತನಕ ವಿಸ್ತರಿಸುವಂತೆ ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್