ಧರ್ಮಸ್ಥಳ ಪ್ರಕರಣದ ಹಿಂದಿರುವವರು ಪತ್ತೆಯಾಗಬೇಕು : ಅಣ್ಣಾಮಲೈ
ಬೆಂಗಳೂರು, 23 ಆಗಸ್ಟ್ (ಹಿ.ಸ.) : ಆ್ಯಂಕರ್ : ಧರ್ಮಸ್ಥಳ ಪ್ರಕರಣದ ತನಿಖೆ ಕೇವಲ ಮುಸುಕುದಾರಿ ಚಿನ್ನಯ್ಯ ಬಂಧನದಲ್ಲಿ ಅಂತ್ಯಗೊಳ್ಳಬಾರದು, ಅವನ ಹಿಂದೆ ಇರುವ ನಿಜವಾದ ಸೂತ್ರಧಾರರನ್ನು ಬಹಿರಂಗಪಡಿಸಬೇಕು ಎಂದು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಒತ್ತಾಯಿಸಿದ್ದಾರೆ. ಎಕ್ಸ್‌ನಲ್ಲಿ ದೀರ್
Annamalyi


ಬೆಂಗಳೂರು, 23 ಆಗಸ್ಟ್ (ಹಿ.ಸ.) :

ಆ್ಯಂಕರ್ : ಧರ್ಮಸ್ಥಳ ಪ್ರಕರಣದ ತನಿಖೆ ಕೇವಲ ಮುಸುಕುದಾರಿ ಚಿನ್ನಯ್ಯ ಬಂಧನದಲ್ಲಿ ಅಂತ್ಯಗೊಳ್ಳಬಾರದು, ಅವನ ಹಿಂದೆ ಇರುವ ನಿಜವಾದ ಸೂತ್ರಧಾರರನ್ನು ಬಹಿರಂಗಪಡಿಸಬೇಕು ಎಂದು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಒತ್ತಾಯಿಸಿದ್ದಾರೆ.

ಎಕ್ಸ್‌ನಲ್ಲಿ ದೀರ್ಘ ಪೋಸ್ಟ್‌ ಹಾಕಿರುವ ಅಣ್ಣಾಮಲೈ, ಧರ್ಮಸ್ಥಳ ದೇವಾಲಯದ ವಿರುದ್ಧ ಅಪಪ್ರಚಾರ ನಡೆಯುತ್ತಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಪುರಾವೆಗಳಿಲ್ಲದೆ ವಿಶೇಷ ತನಿಖಾ ತಂಡ ರಚಿಸಿ 13 ಸ್ಥಳಗಳಲ್ಲಿ ಉತ್ಖನನ ನಡೆಸಿದರೂ ಯಾವುದೇ ಮಹತ್ವದ ಸುಳಿವು ಸಿಗದಿರುವುದನ್ನು ಅವರು ಮೂರ್ಖತನವೆಂದು ಕರೆದಿದ್ದಾರೆ. ದೊರೆತ ಅಸ್ಥಿಪಂಜರಗಳು ಪುರುಷರದ್ದಾಗಿರುವುದಾಗಿ ವೈದ್ಯಕೀಯ ವರದಿ ಹೇಳಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರಕರಣದಲ್ಲಿ ಹೇಳಿಕೆ ನೀಡಿದ್ದ ಸುಜಾತಾ ಭಟ್ ಕೂಡ ಒತ್ತಾಯಕ್ಕೆ ಮಣಿದು ಸುಳ್ಳು ದೂರು ದಾಖಲಿಸಿದ್ದಾಗಿ, ನಂತರ ಅದನ್ನು ತಾನೇ ಒಪ್ಪಿಕೊಂಡಿರುವುದನ್ನು ಅಣ್ಣಾಮಲೈ ತಮ್ಮ ಪೋಸ್ಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಘಟನೆ ಕೇವಲ ಒಬ್ಬ ವ್ಯಕ್ತಿಯ ಕೃತ್ಯವಲ್ಲ. ಅವನಿಗೆ ಮಾರ್ಗದರ್ಶನ ನೀಡಿದವರು ಯಾರು? ಹಣಕಾಸು ಒದಗಿಸಿದವರು ಯಾರು? ಧರ್ಮಸ್ಥಳವನ್ನು ಕಳಂಕಿತಗೊಳಿಸುವುದರಿಂದ ಯಾರಿಗೆ ಲಾಭ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಅತ್ಯಗತ್ಯ, ಎಂದು ಅವರು ಹೇಳಿದ್ದಾರೆ.

ಪ್ರಕರಣದ ಹಿಂದಿರುವ ನಿಜವಾದ ಪಿತೂರಿ ಮತ್ತು ಸೂತ್ರಧಾರರನ್ನು ಪತ್ತೆಹಚ್ಚಿ, ಹೊಣೆಗಾರರನ್ನಾಗಿ ಮಾಡಬೇಕೆಂದು ಅಣ್ಣಾಮಲೈ ತಮ್ಮ ಪೋಸ್ಟ್‌ನಲ್ಲಿ ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande