ಧರ್ಮಸ್ಥಳ ಪ್ರಕರಣದಲ್ಲಿ ಸತ್ಯಮೇವ ಜಯತೆ : ಬಸವರಾಜ ಬೊಮ್ಮಾಯಿ
ಧರ್ಮಸ್ಥಳ ಪ್ರಕರಣದ ಷಡ್ಯಂತ್ರ ಬಯಲಿಗೆಳೆಯಲು ಎನ್ ಐಎ ತನಿಖೆಗೆ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ
Bommayi


ಬೆಂಗಳೂರು, 23 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸತ್ಯ ಮೇವ ಜಯತೆ. ಧರ್ಮೊ ರಕ್ಷತಿ ರಕ್ಷಿತಃ. ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ತಿಳಿಸಲು ರಾಜ್ಯ ಸರ್ಕಾರ ತನಿಖೆಯನ್ನು ಎನ್ ಐಎ ಗೆ ಕೊಡಬೇಕು ಮತ್ತು ಮುಸುಕುದಾರಿ ಚಿನ್ನಯ್ಯ ಹೇಳಿರುವ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಇಲ್ಲದಿದ್ದರೆ ರಾಜ್ಯ ಸರ್ಕಾರ ಷಡ್ಯಂತ್ರದ ಒಂದು ಭಾಗ ಎಂದು ಜನರು ತೀರ್ಮಾನಿಸುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ತನಿಖೆಯನ್ನು ಎನ್ ಐಎಗೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಧರ್ಮಸ್ಥಳದ ವಿಚಾರದಲ್ಲಿ ಎಸ್ ಐಟಿ ಮೊದಲು ಮಾಡಬೇಕಿರುವ ಕೆಲಸವನ್ನು ಕೊನೆಯಲ್ಲಿ ಮಾಡುತ್ತಿದೆ. ದೂರುದಾರನ ಅರ್ಹತೆ, ದೂರಿನ ಅರ್ಹತೆ ಸಾಕ್ಷ್ಯಾಧಾರಗಳು ಇವುಗಳನ್ನು ಖಾತ್ರಿ ಪಡಿಸದೆ ಎಸ್ ಐಟಿ ರಚನೆ ಮಾಡಿದ್ದು ಮತ್ತು ಅವರು ಅಗೆಯಲು ಪ್ರಾರಂಭಿಸಿರುವುದು ಕತ್ತಲಲ್ಲಿ ಕಾರ್ಯ ಆರಂಭ ಮಾಡಿದಂತಾಗಿದೆ ಎಂದು ತಿಳಿಸಿದ್ದಾರೆ.

ಎಸ್ ಐಟಿ ಮಾಡಿಸುವ ಉದ್ದೇಶ ಮತ್ತು ಎಸ್ ಐಟಿ ಮಾಡುವ ಕೆಲವರ ಉದ್ದೇಶ ಧರ್ಮಸ್ಥಳವನ್ನು ಅಪಖ್ಯಾತಿಗೊಳಿಸುವ ಅಪನಂಬಿಕೆ ಮೂಡಿಸುವ ಹಾಗೂ ಅಪಮಾನ ಮಾಡುವ ಒತ್ತಾಯ ಇದ್ದಿದ್ದು ಸ್ಪಷ್ಟ. ಮತ್ತು ಇಂತಹ ವಿಚಾರ ಧಾರೆಗೆ ರಾಜ್ಯ ಸರ್ಕಾರದಲ್ಲಿ ಪುಷ್ಠಿ ಸಿಗುತ್ತದೆ ಎಂದು ವಿಶ್ವಾಸ ಇಟ್ಟು ಒತ್ತಡ ಹಾಕಿದ್ದಾರೆ ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಎಸ್ ಐಟಿ ರಚನೆ ಮಾಡಿದೆ ಎಂದು ಹೇಳಿದ್ದಾರೆ.

ಎಸ್ ಐಟಿಯಲ್ಲಿರುವ ದಕ್ಷ ಪೊಲಿಸ್ ಅಧಿಕಾರಿಗಳಿಗೆ ಮುಕ್ತವಾದ ಸ್ವತಂತ್ರ ಕೊಟ್ಟಿರಲಿಲ್ಲ ಅನ್ನುವುದು ತನಿಖೆ ನಡೆದಿರುವ ರೀತಿಯಲ್ಲಿ ಬಹಳ ಸ್ಪಷ್ಟವಾಗುತ್ತದೆ. ಒಂದು ರೀತಿಯಲ್ಲಿ ಮಾಧ್ಯಮಗಳು ಪ್ರತಿ ಹಂತದಲ್ಲಿ ಎಲ್ಲ ಉತ್ಖನನದ ಮಾಹಿತಿ ನೀಡಿದಾಗ ಸರ್ಕಾರದ ನೈತಿಕ ಸ್ಥೈರ್ಯ ಕರಗಿ ಹೋಗಿ ಸರ್ಕಾರವು ಜನಾಕ್ರೋಶವನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸಬೆಕಾಗುತ್ತದೆ ಎಂದು ಬಿಜೆಪಿಯ ಚಳುವಳಿಯನ್ನು ಗುರುತಿಸಿ ತಮ್ಮ ಉದ್ದೇಶ ಮತ್ತು ತನಿಖೆಯ ದಾರಿಯನ್ನು ಬದಲಾವಣೆ ಮಾಡಿ ಈಗ ನಿಜವಾದ ತನಿಖೆ ಪ್ರಾರಂಭ ಮಾಡಿದ್ದಾರೆ. ಇದರಲ್ಲಿ ಇನ್ನಿತರ ಕೇಸಿನಲ್ಲಿ ದಕ್ಷಿಣ ಕನ್ನಡ ಪೊಲಿಸರು ಸರಿಯಾದ ರೀತಿಯಲ್ಲಿ ತನಿಖೆ ಮಾಡಿದ್ದರಿಂದ ಸತ್ಯ ಹೊರತರಲು ಎಸ್ ಐಟಿ ಮುಂದಾಗುವ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಧ್ಯಮಗಳು ಪ್ರಚಾರ ಮಾಡಿದ್ದು ನೋಡಿದರೆ ತನಿಖೆ ವಿಚಾರ ಬಿಟ್ಟು ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಸರ್ಕಾರ ಕಡಿವಾಣ ಹಾಕದಿರುವುದು ನೋಡಿದರೆ ಎಸ್ ಐಟಿ ತನಿಖೆಯಿಂದ ಸತ್ಯ ಹೊರ ಬರುವ ನಂಬಿಕೆ ಇಲ್ಲ. ರಾಜ್ಯ ಸರ್ಕಾರ ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ತಿಳಿಸಲು ತನಿಖೆಯನ್ನು ಎನ್ ಐಎ ಗೆ ಕೊಡಬೇಕು ಮತ್ತು ಮುುಸಕುದಾರಿ ಚಿನ್ನಯ್ಯ ಹೇಳಿರುವ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಇಲ್ಲದಿದ್ದರೆ ರಾಜ್ಯ ಸರ್ಕಾರ ಷಡ್ಯಂತ್ರದ ಒಂದು ಭಾಗ ಎಂದು ಜನರು ತೀರ್ಮಾನಿಸುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ತನಿಖೆಯನ್ನು ಎನ್ ಐಎಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande