ಧಾರವಾಡ, 23 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಹೆಚ್ಚಿನ ಬೆಳೆ ಮತ್ತು ಸಾರ್ವಜನಿಕ ಹಾನಿ ಸಂಭವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಇಂದು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವಲಗುಂದ ಪಟ್ಟಣದ ಗುಡ್ಡದಕೇರಿ ಓಣಿಯಲ್ಲಿರುವ ದ್ಯಾಮವ್ವ ಬಣ್ಣೆಣ್ಣನವರ ಮನೆ ಸಂಪೂರ್ಣ ಹಾನಿಗೊಂಡಿದ್ದು, ಸಚಿವ ಲಾಡ್ ವೈಯಕ್ತಿಕವಾಗಿ 25 ಸಾವಿರ ರೂ. ಪರಿಹಾರ ನೀಡಿ, ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿದರು.
ನವಲಗುಂದ ಭಾಗದ ರೈತರು, ಹೆಸರು ಮತ್ತು ಈರುಳ್ಳಿ ಬೆಳೆ ಹಾನಿಗೊಂಡು ಸಂಕಷ್ಟ ಎದುರಿಸುತ್ತಿರುವ ಕುರಿತು ತಮ್ಮ ಅಳಲನ್ನು ಸಚಿವರ ಮುಂದೆ ಹೇಳಿಕೊಂಡರು.
ಸಾಲದೊಂದಿಗೆ ಬಿತ್ತಿದ ಬೆಳೆ ನಷ್ಟವಾಗಿದ್ದು, ಭವಿಷ್ಯದ ಮೇಲೆ ಕಪ್ಪು ಛಾಯೆ ಬಿದ್ದಿದೆ ಎಂದು ಮನವಿ ಮಾಡಿದರು.
ಸಚಿವರು ಸರ್ಕಾರದ ಗಮನಕ್ಕೆ ತಂದು, ನಷ್ಟ ಪರಿಹಾರ ಮತ್ತು ಬೆಳೆ ವಿಮೆ ವ್ಯವಸ್ಥೆ ಮಾಡಿಸುವ ಭರವಸೆ ನೀಡಿದರು.
ನವಲಗುಂದ ಕ್ಷೇತ್ರದ ಶಾಸಕ ಎನ್. ಹೆಚ್. ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa