ವೈದ್ಯಕೀಯ ಕನ್ನಡ ಸಾಹಿತ್ಯ ಹೆಚ್ಚಾಗಲಿ : ಡಾ. ರಹಮತ್ ತರೀಕೆರೆ 
ಡಾ. ಎ. ನಂಜಪ್ಪ ವೇದಿಕೆ, ಬಳ್ಳಾರಿ, 23 ಆಗಸ್ಟ್ (ಹಿ.ಸ.) : ಆ್ಯಂಕರ್ : ಕನ್ನಡ ಭಾಷೆಯಲ್ಲಿ ವೈದ್ಯಕೀಯ ಸಾಹಿತ್ಯವನ್ನು ಪ್ರೋತ್ಸಾಹಿಸಿ ಹೊಸ ಬರಹಗಾರರನ್ನು ಗುರುತಿಸಿ - ಬೆಳೆಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ಇನ್ಮೂ ಹೆಚ್ವಾಗಲಿ ಎಂದು ಲೇಖಕ ಡಾ. ರಹಮತ್ ತರೀಕೆರೆ ಅವರು‌ ಆಶಯ ವ್ಯಕ್ತಪಡಿಸ
ವೈದ್ಯಕೀಯ ಕನ್ನಡ ಸಾಹಿತ್ಯದ ಪ್ರಯತ್ನಗಳು ಹೆಚ್ಚಾಗಲಿ :  ಡಾ. ರಹಮತ್ ತರೀಕೆರೆ ಆಶಯ


ವೈದ್ಯಕೀಯ ಕನ್ನಡ ಸಾಹಿತ್ಯದ ಪ್ರಯತ್ನಗಳು ಹೆಚ್ಚಾಗಲಿ :  ಡಾ. ರಹಮತ್ ತರೀಕೆರೆ ಆಶಯ


ವೈದ್ಯಕೀಯ ಕನ್ನಡ ಸಾಹಿತ್ಯದ ಪ್ರಯತ್ನಗಳು ಹೆಚ್ಚಾಗಲಿ :  ಡಾ. ರಹಮತ್ ತರೀಕೆರೆ ಆಶಯ


ಡಾ. ಎ. ನಂಜಪ್ಪ ವೇದಿಕೆ, ಬಳ್ಳಾರಿ, 23 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕನ್ನಡ ಭಾಷೆಯಲ್ಲಿ ವೈದ್ಯಕೀಯ ಸಾಹಿತ್ಯವನ್ನು ಪ್ರೋತ್ಸಾಹಿಸಿ ಹೊಸ ಬರಹಗಾರರನ್ನು ಗುರುತಿಸಿ - ಬೆಳೆಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ಇನ್ಮೂ ಹೆಚ್ವಾಗಲಿ ಎಂದು ಲೇಖಕ ಡಾ. ರಹಮತ್ ತರೀಕೆರೆ ಅವರು‌ ಆಶಯ ವ್ಯಕ್ತಪಡಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ ಮತ್ತು ಕನ್ನಡ ವೈದ್ಯ ಬರಹಗಾರರ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿರುವ 'ವೈದ್ಯಕೀಯ ಸಾಹಿತ್ಯ - ಜನಪದ ಸಾಹಿತ್ಯ' ಶೀರ್ಷಿಕೆಯ ಎರಡು ದಿನಗಳ 'ಕನ್ನಡ ವೈದ್ಯಕೀಯ ಬರಹಗಾರರ ಆರನೇ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ವೈದ್ಯರು ವೈದ್ಯಕೀಯ ವೃತ್ತಿಯ ‌ಜೊತೆಯಲ್ಲಿ ವೈದ್ಯಕೀಯ ಲೇಖನಗಳನ್ನು ಬರೆಯುವ ಮೂಲಕ ಸೃಜನಾತ್ಮಕ ಕೆಲಸದಲ್ಲಿ ತಮ್ಮನ್ನು ತಾವು, ಸ್ವಯಂಪ್ರೇರಣೆಯಿಂದ ಅಕ್ಷರ ಕೃಷಿಯಲ್ಲಿ ತೊಡಗಿಕೊಂಡದ್ದಾರೆ. ಈ ಮೂಲಕ‌ ವೃತ್ತಿಯ ಒತ್ತಡಗಳನ್ನು, ಜಂಜಡಗಳನ್ನು ಮರೆಯುತ್ತಿದ್ದಾರೆ ಎಂದರು.

ಈ ಎರಡು ದಿನಗಳ ಸಮ್ಮೇಳನದಲ್ಲಿ ಮೊದಲನೆಯ ದಿನ ಹೆಚ್ಚು ವೈದ್ಯ-ಲೇಖಕರು ಭಾಗವಹಿಸಿ, ಸಾಹಿತ್ಯ, ಕಾವ್ಯವಾಚನ ಕಾರ್ಯಕ್ರಮಗಳು ಜರುಗಿದವು.

ಮುಂಜಾನೆ ಎಂಟು ಗಂಟೆಗೆ ರಘುವೀರ್ ಆರ್ಥೋ ಸೆಂಟರ್ ನಿಂದ ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಬೆಸಗರಹಳ್ಳಿ ರಾಮಣ್ಣ ಮಹಾದ್ವಾರದ ಮೂಲಕ ಸಾಗಿ ಡಾ. ಎ. ನಂಜಪ್ಪ ವೇದಿಕೆಯಲ್ಲಿ ಸಮಾರೋಪಗೊಂಡಿತು.

ಮೊದಲ ಗೋಷ್ಠಿಯಲ್ಲಿ ಡಾ. ಸಿ.ಆರ್. ಚಂದ್ರಶೇಖರ್ ಅವರು, 'ಕನ್ನಡ ವೈದ್ಯ ಸಾಹಿತ್ಯ ಮುಂದೇನು? ಮಾರ್ಗಸೂಚಿಗಳು' ವಿಷಯದ ಕುರಿತು ಮತ್ತು ಡಾ. ಎಸ್.ಪಿ. ಯೋಗಣ್ಣ ಅವರು 'ಕನ್ನಡ ವೈದ್ಯ ಸಾಹಿತ್ಯದ ಮೈಲುಗಳು' ವಿಷಯದ ಕುರಿತು ಉಪನ್ಯಾಸ ನೀಡಿದರು.

ನಂತರ, ಶ್ರೇಷ್ಠ ವೈದ್ಯಕೀಯ ಹಸ್ತ ಪ್ರತಿ ಶಾಸ್ತ್ರ ಮತ್ತು ಕೃತಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಸಮಾನಾಂತರ ವೇದಿಕೆಯಲ್ಲಿ ಕಿರಿಯ ವೈದ್ಯರಲ್ಲಿ 'ವೃತ್ತಿ ಒತ್ತಡದ ಕಿರಿಕಿರಿ' ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಡಾ. ಹರೀಶ್ ದೇಲಂತಬೆಟ್ಟು ಅವರು ಉಪನ್ಯಾಸ ನೀಡಿದರು.

ಡಾ. ಕೊಟ್ರೇಶ್ .ಎಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಸುಪ್ರತಾ, ಡಾ. ವಿನಯ್, ಡಾ. ಶ್ರೀನಿವಾಸ್ ಇವರುಗಳ ಉಸ್ತುವಾರಿಯಲ್ಲಿ ಡಾ. ಪರಸಪ್ಪ ಬಂದ್ರಕಳ್ಳಿ, ಡಾ. ದಿವ್ಯ ಅವರು ಕಾರ್ಯವನ್ನು ನಿರ್ವಹಿಸಿದರು.

'ಅನ್ಯ ಭಾಷೆಗಳಲ್ಲಿ ವೈದ್ಯ ಸಾಹಿತ್ಯ'ದ ಕುರಿತು ನಡೆದ ಎರಡನೆಯ ಗೋಷ್ಠಿಯಲ್ಲಿ ‌ಡಾ. ಅನಿಲ್ ಮಡಿಕೆ ಅವರು 'ಮರಾಠಿ ವೈದ್ಯ ಸಾಹಿತ್ಯ' ಕುರಿತು, ‌ ಡಾ. ಅಲ್ಲೂರಿ ವಿಜಯಲಕ್ಷ್ಮಿ ಅವರು 'ತೆಲುಗು ವೈದ್ಯ ಸಾಹಿತ್ಯ' ಕುರಿತು ವಿಷಯ ಮಂಡಿಸಿದರು.

ಮೂರನೇ ಗೋಷ್ಠಿಯಲ್ಲಿ ಪ್ರಕಾಶಕರೊಂದಿಗೆ ಮಾತುಕತೆಯು 'ಥಟ್ಟಂತ ಹೇಳಿ' ಖ್ಯಾತಿಯ ಡಾ. ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆಯಿತು. ಡಾ. ಮಧುಸೂದನ್ ಕಾರಿಗನೂರು ಸಂವಾದ ನಡೆಸಿಕೊಟ್ಟರು. ಅಭಿನವ ಪ್ರಕಾಶನದ ರವಿಕುಮಾರ್, ವಿಕ್ರಂ ಪ್ರಕಾಶನದ ಮೋದ ಹರಿಪ್ರಸಾದ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಡಾ. ಶ್ರೀನಿವಾಸ್ ಹರಪ್ಪನಹಳ್ಳಿ ಮತ್ತು ಡಾ. ವಿಶ್ವನಾಥ ಅವರು ಸಂವಾದ ‌ನಿರ್ವಹಿಸಿದರು.

ನಾಲ್ಕನೆಯ ‌ಗೋಷ್ಠಿಯಲ್ಲಿ 'ಕನ್ನಡ ನಾಡು-ನುಡಿ, ನೆಲ-ಜಲ' ವಿಷಯದ ರಸಪ್ರಶ್ನೆ ಸ್ಪರ್ಧೆ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ನಡೆಯಿತು. ಈ ವೇದಿಕೆಯ ಅಧ್ಯಕ್ಷತೆಯನ್ನು ಡಾ. ರೇಣುಕಾ ಮಂಜುನಾಥ್ ಅವರು‌ ವಹಿಸಿದ್ದರು. ಕ್ವಿಜ್ ಮಾಸ್ಟರ್ ಡಾ. ಶ್ರೀಕಾಂತ್ ಹೆಗಡೆ ಅವರು‌ ಸ್ಪರ್ಧೆಯನ್ನು ನಡೆಸಿಕೊಟ್ಟರು.

ಡಾ. ವಿನಯ ಶ್ರೀನಿವಾಸ್ ಡಾ. ದಿನೇಶ್ ಗುಡಿ‌ ಅವರು‌ ವೇದಿಕೆಯನ್ನು ‌ನಿರ್ವಹಿಸಿದರು. ಬಯಲಾಟ ಮತ್ತು ಜೋಗತಿ ಕುಣಿತ ಪ್ರದರ್ಶನಗೊಂಡವು.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ. ಅರವಿಂದ್ ಪಟೇಲ್ ಅವರು ವಹಿಸಿಕೊಂಡಿದ್ದಾರೆ. ವೇದಿಕೆಯಲ್ಲಿ ಡಾ. ದಿವಾಕರ ಗಡ್ಡಿ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande