ರಾಯಚೂರು, 23 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2025-26 ನೇ ಸಾಲಿಗೆ ಜಾರಿಯಲ್ಲಿರುವ ನಾನಾ ಯೋಜನೆಗಳಡಿ ಸೇವಾ-ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ವಿಕಲಚೇತನ ಫಲಾನುಭವಿಗಳು ನಾನಾ ಯೋಜನೆಗಳಾದ, ಆಧಾರ್ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ನಿರುದ್ಯೋಗ ಭತ್ಯೆ ಯೋಜನೆ, ಶಿಶುಪಾಲನೆ ಭತ್ಯ ಯೋಜನೆ, ಮರಣ ಪರಿಹಾರ ನಿಧಿ ಯೋಜನೆ, ಪ್ರತಿಭೆ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್ ಯೋಜನೆ, ದೃಷ್ಟಿದೋಷ ಹೊಂದಿದ ವಿಕಲಚೇತನರಿಗೆ ಬ್ರೈಲ್ ಕಿಟ್ ಯೋಜನೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ಸಾಧನೆ-ಸಲಕರಣೆ ಯೋಜನೆ, ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲ್‍ಚೇರ್ ಯೋಜನೆಗಳಿಗೆ ಆನ್‍ಲೈನ್ ವೆಬ್ ಸೈಟ್‍ಗಳಾದ, ಸೇವಾ-ಸಿಂಧು ತಂತ್ರಾಂಶದಡಿ ,ಗ್ರಾಮ-ಓನ್, ಕರ್ನಾಟಕ-ಓನ್, ಬೆಂಗಳೂರು-ಓನ್ ಹಾಗೂ https://sevasindhu.karnataka.gov.in/Sevasindhu/Kannada ಪೋರ್ಟಲ್ ಮೂಲಕ ಆಗಸ್ಟ್ 30 ರೊಳಗೆ ಅರ್ಜಿಗಳನ್ನು ಸೂಕ್ತ ದಾಖಲಾತಿಗಳೊಂದಿಗೆ ಆನ್‍ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ
ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣವಾದ ಮಾರ್ಗದರ್ಶನಕ್ಕಾಗಿ, ತಾಲೂಕಿನ ಎಂ.ಆರ್.ಡಬ್ಲ್ಯೂ ಅಧಿಕಾರಿಗಳನ್ನು ಸಂಪರ್ಕಿಸಲು ದೂರವಾಣಿ ಸೊಖ್ಯೆ: ರಾಯಚೂರು ತಾಲೂಕಿನ ಎಂ.ಆರ್.ಡಬ್ಲ್ಯೂ ಅಧಿಕಾರಿಗಳಾದ, ಅಮರೇಶ ಯಾದವ್-9972237508, ಮಾನವಿ-ಸಿರವಾರ ತಾಲೂಕಿನ ಎಂ.ಆರ್.ಡಬ್ಲ್ಯೂ ಅಧಿಕಾರಿಗಳಾದ ರಾಘವೇಂದ್ರ-9740203769, ದೇವದುರ್ಗ ತಾಲೂಕಿನ ಎಂ.ಆರ್.ಡಬ್ಲ್ಯೂ ಅಧಿಕಾರಿಗಳಾದ ಲೋಕಪ್ಪ ನೂರು ನಾಯ್ಕೆ-9945207693, ಸಿಂಧನೂರು ತಾಲೂಕಿನ ಎಂ.ಆರ್.ಡಬ್ಲ್ಯೂ ಅಧಿಕಾರಿಗಳಾದ ಬಸವರಾಜ ಸಾಸಲಮರಿ-9900298217, ಲಿಂಗಸ್ಗೂರು-ಮಸ್ಕಿ, ತಾಲೂಕಿನ ಎಂ.ಆರ್.ಡಬ್ಲ್ಯೂ ಅಧಿಕಾರಿಗಳಾದ ನಾಗರಾಜ-9901668380 ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ, ಕಚೇರಿಗೆ ಕಚೇರಿ ಕೆಲಸದ ಸಮಯದಲ್ಲಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್