ರಾಯಚೂರು, 23 ಆಗಸ್ಟ್ (ಹಿ.ಸ.) :
ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-02ರ ವ್ಯಾಪ್ತಿಯ 110 ಕೆವಿಯಲ್ಲಿ ಎಂ.ಯು.ಎಸ್.ಎಸ್. ವಡವಟ್ಟಿ ನಿರ್ವಹಣೆ ಕೇಂದ್ರದಲ್ಲಿ ವಿದ್ಯುತ್ ಮಾರ್ಗದ ಕಾಮಗಾರಿ ಮತ್ತು ಹೊಸ ಲಿಂಕ್ ಲೈನ್ ನಿರ್ವಹಣೆ ಹಿನ್ನಲ್ಲೆಯಲ್ಲಿ ಆಗಸ್ಟ್ 25ರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 05 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಅಂದು ಬೆಳಗ್ಗೆ ಗದ್ವಾಲ್‍ರೋಡ್ ಇಂಡಸ್ಟ್ರೀಯಿಲ್ ಏರಿಯಾ., ದೇವಿ ನಗರ, ಹರಿಜನವಾಡ, ನವಾಬ್‍ಗಡ್ಡ, ಎನ್.ಜಿ.ಓ ಕಾಲೋನಿ, ಜಲಾಲ್ ನಗರ, ಮಾರ್ಕೇಟ್ ಯಾರ್ಡ್, ನೀರಭಾವಿ ಕುಂಟಾ, ಬಸವನಭಾವಿ ಸರ್ಕಲ್, ಗಂಜ್ ಜಲಾಲ್ ನಗರ, ಮಾರ್ಕೇಟ್ ಯಾರ್ಡ್, ನೀರಭಾವಿ ಕುಂಟಾ, ಬಸವನಭಾವಿ ಸರ್ಕಲ್, ಗಂಜ್ ಸರ್ಕಲ್, ತಾಯಮ್ಮಗುಡಿ, ದೇವಿನಗರ, ಅಶ್ವಿನಿ ಕಾಲೋನಿ, ಅಗ್ರೀಗೋಲ್ಡ್, ಗದ್ವಾಲ ರೋಡ್, ಎಮ್.ವಿ.ಜಿ. ಲೇಔಟ್ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-02ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್