ಉದ್ಯೋಗ ಸೃಷ್ಠಿಸುವ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಪ್ರಯತ್ನ : ರವಿ ಬೋಸರಾಜು
ರಾಯಚೂರು, 23 ಆಗಸ್ಟ್ (ಹಿ.ಸ.) : ಆ್ಯಂಕರ್ : ನಮ್ಮ ರಾಯಚೂರಿನ ವಿದ್ಯಾರ್ಥಿಗಳು, ಯುವಕರು ಹುಟ್ಟೂರಿನಲ್ಲಿಯೇ ಶಿಕ್ಷಣ ಪಡೆದು ಇಲ್ಲಿಯೇ ಉದ್ಯೋಗ ಮಾಡಬೇಕೆಂಬ ದೊಡ್ಡ ಕನಸಿದೆ. ಬೇರೆಡೆಗೆ ಹೋಗಿ ಉದ್ಯೋಗಕ್ಕಾಗಿ ಅಲೆದಾಟ ತಪ್ಪಿಸಲು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಠಿಸುವ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಪ್ರಾಮಾ
ಉದ್ಯೋಗ ಸೃಷ್ಠಿಸುವ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಪ್ರಯತ್ನ - ರವಿ ಬೋಸರಾಜು


ಉದ್ಯೋಗ ಸೃಷ್ಠಿಸುವ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಪ್ರಯತ್ನ - ರವಿ ಬೋಸರಾಜು


ರಾಯಚೂರು, 23 ಆಗಸ್ಟ್ (ಹಿ.ಸ.) :

ಆ್ಯಂಕರ್ : ನಮ್ಮ ರಾಯಚೂರಿನ ವಿದ್ಯಾರ್ಥಿಗಳು, ಯುವಕರು ಹುಟ್ಟೂರಿನಲ್ಲಿಯೇ ಶಿಕ್ಷಣ ಪಡೆದು ಇಲ್ಲಿಯೇ ಉದ್ಯೋಗ ಮಾಡಬೇಕೆಂಬ ದೊಡ್ಡ ಕನಸಿದೆ. ಬೇರೆಡೆಗೆ ಹೋಗಿ ಉದ್ಯೋಗಕ್ಕಾಗಿ ಅಲೆದಾಟ ತಪ್ಪಿಸಲು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಠಿಸುವ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಪ್ರಾಮಾಣಿಕವಾಗಿ‌ ಪ್ರಯತ್ನಿಸುತ್ತಿದ್ದೇನೆ. ಕೈಗಾರಿಕೆಗಳ ಸ್ಥಾಪನೆ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ತಿಳಿಸಿದರು.

ರಾಯಚೂರಿನ ಪಂಡೀತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಎನ್ಎಸ್ ಬೋಸರಾಜು ಫೌಂಡೇಶನ್ ಹಾಗೂ 1 ಎಂ 1 ಬಿ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡು ದಿನದ ಔದ್ಯೋಗಿಕ ತರಬೇತಿ ಕಾರ್ಯಗಾರ ಹಾಗೂ ಒಂದು ದಿನದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯುವಕ, ಯುವತಿಯರು ದೂರದ ಮಹಾ ನಗರಗಳಿಗೆ ಹೋಗಿ ಉದ್ಯೋಗ ಮಾಡುವಾಗ ಪಾಲಕರ ಕಷ್ಟ ನನಗೆ ಗೊತ್ತಿದೆ. ಈ ಪಾಲಕರ ಹಾಗೂ ಯುವಕ, ಯುವತಿಯರ ಕಷ್ಟ ತಪ್ಪಿಸಲು ಇಲ್ಲಿಯೇ ಉದ್ಯೋಗ ಸೃಷ್ಠಿಯಾಗಬೇಕು ಹಾಗಾಗಿ ನಮ್ಮ ಫೌಂಡೇಷನ್ ನಿಂದ ಉದ್ಯೋಗ ಸೃಷ್ಠಿಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ.

ಈ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರೆತ ಅಭ್ಯರ್ಥಿಗಳು ಸಂಸ್ಥೆಯೊಂದಿಗೆ ವಿಶ್ವಾಸರ್ಹತೆ ಗಳಿಸಿ ಉನ್ನತ ಮಟ್ಟದ ಸ್ಥಾನಕ್ಕೇರಲು ಪ್ರಮಾಣಿಕವಾಗಿ‌ ನಿಮಗೆ ಕೆಲಸಮಾಡಿ ನಮಗೆ ಕೆಲಸ ನೀಡಿದ ಕಂಪನಿಯ ಘನತೆಯನ್ನು ಹೆಚ್ಚಿಸಬೇಕು.

ಉದ್ಯೋಗ ಆಕಾಂಕ್ಷಿಗಳು ಕಂಪನಿಗಳಿಗೆ ಸಂದರ್ಶನ ನೀಡಿದಾಗ ಉದ್ಯೋಗ ಸಿಗದಿದ್ದರೆ ಚಿಂತೆ ಪಡಬೇಡಿ ನಮ್ಮಲ್ಲಿ ನಿಮ್ಮ ಸಂಪೂರ್ಣ ಡಾಟಾ ಇರುತ್ತದೆ ಮುಂದಿನ ದಿನದಲ್ಲಿ ನಿಮಗೆ ಮೊದಲ ಆದ್ಯತೆ ನೀಡಲಾಗುವುದು. ಅವಶ್ಯವಿದ್ದಲ್ಲಿ ಸಂಪರ್ಕಿಸಿ ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ರಾಯಚೂರಿನಲ್ಲಿ ಗಂಜ್ ಕೃಷಿ ಉತ್ಪನ್ನ ಮಾರುಕಟ್ಟೆ, ಹತ್ತಿ ಮಾರುಕಟ್ಟೆ, ವೈಟಿಪಿಎಸ್, ಆರ್ಟಿಪಿಎಸ್ ಇನ್ನೀತರ ಕೈಗಾರಿಕೆಯ ಉದ್ಯಮಗಳಿಂದ ನೂರಾರು ಕೋಟಿಯ ವ್ಯವಹಾರವಾಗುತ್ತಿದೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಠಿಸುವ ದೊಡ್ಡ ದೊಡ್ಡ ಕಂಪನಿಗಳ ಸ್ಥಾಪನೆಯಾಗಬೇಕಿದೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಒತ್ತಾಯ ಬೇಕು ಎಂದು ತಿಳಿಸಿದರು.

ನಂತರ 1 ಎಂ 1 ಬಿ ಯ ಸಂಚಾಲಕರಾದ ದೀಪಿಕಾ ಮಾತನಾಡಿ, ಕಳೆದು ಎರಡು ದಿನಗಳಿಂದ ನಾವು ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿದ್ದೇವೆ ಅನೇಕ ವಿದ್ಯಾರ್ಥಿಗಳು ಅವರ ಕೌಶಲ್ಯದ ಬಗ್ಗೆ ನಮಗೆ ತಿಳಿಸಿದ್ದಾರೆ. ಅಲ್ಲದೆ ನಿನ್ನೆ ಒಬ್ಬ ಅಂಗವಿಕ‌ಲ ನಮ್ಮ ಬಳಿಗೆ ಬಂದು ಮಾತನಾಡಿ, ನಾನು ಅಂಗವಿಕಲನಿದ್ದೇನೆ ದುಡಿಯದಿದ್ದರೆ ಬದುಕಲು ಸಾಧ್ಯವಿಲ್ಲ ಹಾಗಾಗಿ ನನ್ನ ಅಂಗ ವೈಫಲ್ಯವಿದ್ದರೂ ನೀವು ನೀಡಿದ ಕೆಲಸ ಮಾಡುತ್ತೇನೆ. ನನಗೆ ಒಂದು ಅವಕಾಶ ಕೊಡಿಸಿ ಎಂದು ಕೇಳಿರುವುದು ನೋಡಿ ನಮ್ಮ ಈ ಫೌಂಡೆಷನ್ ಕೆಲಸ ಇನ್ನೊಬ್ಬರಿಗೆ ಸಹಕಾರಿಯಾಗಿದೆಯಲ್ಲ ಎಂಬ ಹಮ್ಮೆ, ಸಂತೋಷ ನಮಗೆ ಎಂದರು ಅಭಿಪ್ರಾಯ ವ್ಯಕ್ತಪಡಿಸಿದರು.

ನಿರುದ್ಯೋಗ ಸಮಸ್ಯೆ ನಿವಾರಣೆಗೆ, ಯುವಜನತೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಉದ್ಯೋಗ ಮೇಳಗಳು ಸಹಕಾರಿಯಾಗಿವೆ. ರಾಯಚೂರು ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗಲು ಹೆಚ್ಚೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಉದ್ಯೋಗ ಸೃಷ್ಠಿಯಿಂದ ಆರ್ಥಿಕ ಬಲವರ್ಧನೆಗೆ ಅವಕಾಶ ಸಿಗಲಿದೆ‌. ಉದ್ಯೋಗ ಸೃಷ್ಟಿಗೆ ಪೂರಕವಾಗಿ ಆಯೋಜಿಸಿರುವ ಈ ಮೇಳದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಉದ್ಯೋಗ ಆಕಾಂಕ್ಷಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ವೇದಾಂತ ಶಿಕ್ಷಣ ಸಂಸ್ಥೆಯ ರಾಕೇಶ ರಾಜಲಬಂಡಿ, ಶಾಹಿನ್ ಕಾಲೇಜಿನ ಸೈಯದ್ ಆದಿಲ್, 1 ಎಂ 1 ಬಿ ಸಂಚಾಲಕರಾದ ದೀಪಿಕಾ, ಶೃತಿ, ರಿಸ್ವಾನ್, ಕಾಂಗ್ರೆಸ್ ಮುಖಂಡರಾದ ಜಯವಂತರಾವ್ ಪತಂಗೆ, ನರಸಿಂಹಲು ಮಾಡಗಿರಿ, ಬಿ ರಮೇಶ್ ತಿಮ್ಮಾರೆಡ್ಡಿ, ತೇಜಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು‌.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande