ಅಪಘಾತ ವಿಮೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ
ಬಳ್ಳಾರಿ, 23 ಆಗಸ್ಟ್ (ಹಿ.ಸ.) : ಆ್ಯಂಕರ್ : ನಗರದ ಗುಗ್ಗರಹಟ್ಟಿಯ ನಿವಾಸಿ ರಾಜೇಶ್.ಎ ಅವರಿಗೆ ಸಂಗನಕಲ್ಲು ಗ್ರಾಮದ ವ್ಯಾಪ್ತಿಯಲ್ಲಿ ಎತ್ತಿನಗಾಡಿಯ ವೇಗ ಮತ್ತು ನಿರ್ಲಕ್ಷ್ಯತನದ ಚಾಲನೆಯಿಂದ ಅಪಘಾತದಲ್ಲಿ ಗಾಯಗೊಂಡು ಎಡಗಾಲು ಮತ್ತು ಕಣ್ಣಿಗೆ ತೀವ್ರ ಪೆಟ್ಟಾಗಿದ್ದು, ಅಪಘಾತದ ವಿಮಾ ಮೊತ್ತದ ಪರಿಹಾರ ಪ
ಅಪಘಾತ ವಿಮೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ


ಬಳ್ಳಾರಿ, 23 ಆಗಸ್ಟ್ (ಹಿ.ಸ.) :

ಆ್ಯಂಕರ್ : ನಗರದ ಗುಗ್ಗರಹಟ್ಟಿಯ ನಿವಾಸಿ ರಾಜೇಶ್.ಎ ಅವರಿಗೆ ಸಂಗನಕಲ್ಲು ಗ್ರಾಮದ ವ್ಯಾಪ್ತಿಯಲ್ಲಿ ಎತ್ತಿನಗಾಡಿಯ ವೇಗ ಮತ್ತು ನಿರ್ಲಕ್ಷ್ಯತನದ ಚಾಲನೆಯಿಂದ ಅಪಘಾತದಲ್ಲಿ ಗಾಯಗೊಂಡು ಎಡಗಾಲು ಮತ್ತು ಕಣ್ಣಿಗೆ ತೀವ್ರ ಪೆಟ್ಟಾಗಿದ್ದು, ಅಪಘಾತದ ವಿಮಾ ಮೊತ್ತದ ಪರಿಹಾರ ಪಾವತಿಸುವಂತೆ ಬೆಂಗಳೂರಿನ ಚೋಲಾ ಎಂ.ಎಸ್.ಜನರಲ್ ಇನ್ಸೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗವು ಆದೇಶಿಸಿದೆ.

ರಾಜೇಶ್.ಎ ಅವರು ತಮ್ಮ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ.34/ಇ.ಎವ್.2692 ಗೆ 5 ವರ್ಷಗಳ ಅವಧಿಗೆ ರೂ.8,706 ಗಳ ವಿಮಾ ಕಂತು ಹಾಗೂ ರೂ.375 ಗಳನ್ನು ವೈಯಕ್ತಿಕ ಅಪಘಾತದ ವಿಮಾ ಪಾಲಿಸಿಗೆ ಕಂತು ಪಾವತಿಸಿದ್ದು, ಪಾಲಿಸಿ ಚಾಲ್ತಿ ಅವಧಿಯೊಳಗೆ 29-01-2022 ರಂದು ಅಪಘಾತ ಸಂಭವಿಸಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಮತ್ತು ವಿಮಾ ಕಂಪನಿಗೆ ವೈಯಕ್ತಿಕ ಅಪಘಾತದ ವಿಮಾ ಮೊತ್ತದ ಪರಿಹಾರ ರೂ.7,50,000 ಮತ್ತು ಇತರೆ ವೆಚ್ಚ ಪಾವತಿಸುವಂತೆ ದೂರು ಸಲ್ಲಿಸಿದ್ದರು.

ವಿಮಾ ಕಂಪನಿಯು ಅಪಘಾತವಾಗಿ ಮರಣ ಹೊಂದಿದ್ದರೆ ಮಾತ್ರ ಪಾಲಿಸಿ ಮೊತ್ತ ಅರ್ಹ. ಆದರೆ ಗಾಯಗೊಂಡಲ್ಲಿ ಪರಿಹಾರ ಅರ್ಹವಿಲ್ಲ ಎಂದು ಕ್ಲೈಮ್‌ನ್ನು ತಿರಸ್ಕರಿಸಿದ್ದರು.

ಆಯೋಗದ ಅಧ್ಯಕ್ಷರಾದ ಎನ್.ತಿಪ್ಪೇಸ್ವಾಮಿ ಹಾಗೂ ಸದಸ್ಯರಾದ ಮಾರ್ಲಾ ಶಶಿಕಲಾ ಅವರು ಉಭಯ ಪಕ್ಷಕಾರರ ವಾದ ವಿವಾದ ಆಲಿಸಿ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಪಾಲಿಸಿ ಶೆಡ್ಯೂಲ್‌ನಲ್ಲಿರುವಂತೆ ಒಂದು ವೇಳೆ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಲ್ಲಿ ಶೇ.50 ಪರಿಹಾರ ಅರ್ಹವಿರುತ್ತದೆ. ಶೆಡ್ಯೂಲ್‌ನಲ್ಲಿರುವ ಅಂಶವನ್ನು ಪರಿಗಣಿಸದೇ ಕ್ಲೈಮ್‌ನ್ನು ತಿರಸ್ಕರಿಸುವುದು ಎದುರುದಾರರ ಸೇವಾ ನ್ಯೂನತೆ ಆಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿತು.

ಹಾಗಾಗಿ ದೂರುದಾರರಿಗೆ ಪಾಲಿಸಿ ಮೊತ್ತದ ಶೇ.50 ರಷ್ಟು ಮೊತ್ತ ರೂ. 7,50,000 ವೈಯಕ್ತಿಕ ಅಪಘಾತದ ಪರಿಹಾರದ ಮೊತ್ತ, ಸೇವಾ ನಿರ್ಲಕ್ಷ್ಯತೆಗೆ ರೂ.10,000 ಪರಿಹಾರ ಮತ್ತು ರೂ.5000 ದೂರಿನ ವೆಚ್ಚವನ್ನು 45 ದಿನಗಳೊಗಾಗಿ ಪಾವತಿಸುವಂತೆ ಆಯೋಗ ಆದೇಶಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande