ಧಾರವಾಡ, 23 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲೆಯ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ವಿವಿಧ ಪ್ರಕರಣಗಳಲ್ಲಿಯ ವಾಹನಗಳನ್ನು ವಿಲೇವಾರಿ ಮಾಡಲು ಸಿವಿಲ್ ನ್ಯಾಯಾಧೀಶರು ಹಾಗೂ ನವಲಗುಂದದ ಪ್ರಥಮ ದರ್ಜೆ ನ್ಯಾಯಿಕ ದಂಢಾಧಿಕಾರಿ ಅವರು ಸದರಿ ವಾಹನಗಳನ್ನು ವಿಲೇವಾರಿ ಮಾಡುವ ಪೂರ್ವದಲ್ಲಿ, ವಾಹನ ವಿಲೇವಾರಿ ಮಾಡುವ ವಿಷಯವನ್ನು ವಾಹನಗಳ ಮಾಲೀಕರಿಗೆ ಅಥವಾ ಅವರ ವಾರಸುದಾರರಿಗೆ ತಿಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಸದರಿ ವಾಹನಗಳ ವಿಲೇವಾರಿ ಮಾಡುವುದು ಅವಶ್ಯವಿರುವುದರಿಂದ ಸದರಿ ವಾಹನಗಳ ಮಾಲಿಕರು ನವಲಗುಂದ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08380-229233 ಅಥವಾ 9480804348 ಗೆ ಸಂಪರ್ಕಿಸಬೇಕು ಎಂದು ಧಾರವಾಡ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa