ಗದಗ, 23 ಆಗಸ್ಟ್ (ಹಿ.ಸ.)
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಸತತವಾಗಿ ಮಳೆ ಸುರಿದು ಅತಿವೃಷ್ಟಿಯಾಗಿದ್ದು ಬೆಳೆಗಳು ಮತ್ತು ಮನೆಗಳು ಹಾಳಾಗಿವೆ. ಜನ ಮತ್ತು ಜಾನುವಾರುಗಳ ದೈನಂದಿನ ಬದುಕು ದುಸ್ತರವಾಗಿದೆ. ಮುಂಗಾರು ಪ್ರಾರಂಭದಲ್ಲಿ ಹದವಾದ ಮಳೆ ಆಗಿದ್ದರಿಂದ ಈ ವರ್ಷ ಅಂದಾಜಿಗಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆಯಾಗಿ ಬೆಳೆಗಳು ಬೆಳೆದಿದ್ದವು ಆದರೆ ಮಳೆಯಿಂದ ಬೆಳೆಗಳು ನಾಶವಾದ ಹಿನ್ನೆಲೆಯಲ್ಲಿ ರೈತರಿಗೆ ಅತಿವೃಷ್ಟಿ ಪರಿಹಾರ ನೀಡಲು ಗದಗ ಜಿಲ್ಲಾ ಬಿಜೆಪಿ ನಿಯೋಗವು ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ರವರು ಮಾತನಾಡಿ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಹೆಸರು, ಶೆಂಗಾ, ಗೋವಿನಜೋಳ, ಹತ್ತಿ, ಈರುಳ್ಳಿ, ಮೆಣಸಿನಕಾಯಿ ಬೆಳೆಗಳು ಹಾನಿಗಿಡಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಭಾರದಂತಾಗಿದೆ. ಉಳುಮೆ ಬೀಜ, ಗೊಬ್ಬರ, ಕೂಲಿ ಎಲ್ಲದಕ್ಕೂ ಲಕ್ಷಾಂತರ ರೂಪಾಯಿಗಳಲ್ಲಿ ವೆಚ್ಚ ಮಾಡಿದ ರೈತನ ಬದುಕು ಬೀದಿಗೆ ಬಂದಂತಾಗಿದೆ. ಜಿಲ್ಲೆಯ ಹಲವೆಡೆ ಮನೆಗಳು ಬಿದ್ದಿದ್ದು ಗುಡಿ ಗುಂಡಾರಗಳಲ್ಲಿ ವಾಸ್ತವ್ಯ ಹೂಡಿದ ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಸರಕಾರ ಬೆಳೆ ಮತ್ತು ಮನೆ ಹಾನಿಯ ಬಗ್ಗೆ ಕೂಡಲೆ ಸಮರೋಪಾದಿಯಲ್ಲಿ ಸಮೀಕ್ಷೆ ನಡೆಸಿ ಆದಷ್ಟು ಶೀಘ್ರವಾಗಿ ಪರಿಹಾರ ನೀಡಬೇಕು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ ಜಿಲ್ಲೆಯ ನರಗುಂದ ಹಾಗು ರೋಣ ತಾಲೂಕಿನ ಹಲವು ಹಳ್ಳಿಗಳ ವ್ಯಾಪ್ತಿಯಲ್ಲಿ ಮಲಪ್ರಭಾ ನದಿ ಹಾಗು ಬೆಣ್ಣೆಹಳ್ಳ ಪ್ರವಾಹದಿಂದ ಹೆಚ್ಚಿನ ಹಾನಿಯಾಗಿದ್ದು ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿನಂತಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಯಳವತ್ತಿ, ಗದಗ ನಗರ ಮಂಡಲ ಅದ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ಹಿರಿಯರಾದ ಜಗನ್ನಾಥಸಾ ಭಾಂಡಗೆ, ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೆಮಠ, ಬಿ.ಎಸ್.ಚಿಂಚಲಿ, ಪ್ರಮುಖರಾದ ನಾಗರಾಜ ಕುಲಕರ್ಣಿ, ಭೀಮಸಿಂಗ ರಾಠೋಡ, ಅಶೋಕ ಸಂಕಣ್ಣವರ, ಸಿದ್ದು ಪಲ್ಲೇದ, ಶಿವು ಹಿರೇಮನಿಪಾಟೀಲ, ರಮೇಶ ಸಜ್ಜಗಾರ, ಸಂತೋಷ ಅಕ್ಕಿ, ನಿರ್ಮಲಾ ಕೊಳ್ಳಿ, ಉಷಾ ದಾಸರ, ವಿಜಯಲಕ್ಷ್ಮೀ ಮಾನ್ವಿ, ಪ್ರಕಾಶ ಅಂಗಡಿ, ಮುತ್ತಣ್ಣ ಮುಶಿಗೇರಿ, ಚನ್ನಮ್ಮ ಹುಳಕಣ್ಣವರ, ಲಕ್ಷ್ಮೀಕಾಕಿ, ವಿದ್ಯಾವತಿ ಗಡಗಿ, ಮಹೇಶ ದಾಸರ, ಅಮರನಾಥ ಗಡಗಿ, ರಾಚಯ್ಯ ಹೊಸಮಠ, ಶಂಕರ ಕಾಕಿ, ನವೀನ ಕೊಟೆಕಲ್, ಶೇಖಣ್ಣ ಕನ್ಯಾಳ, ಕುಮಾರ ಮಾರನಬಸರಿ, ಮಹಾದೇವಪ್ಪ ಚಿಂಚಲಿ, ಸುಭಾಸ ಸುಂಕದ, ವಾಯ್.ಪಿ.ಅಡ್ನೂರ, ಎಫ್.ಎಸ್.ಗೋಡಿ, ವಿಶ್ವನಾಥ ಹಳ್ಳಿಕೇರಿ, ಲಕ್ಷ್ಮಣ ದೊಡ್ಮನಿ, ಉಡಚಪ್ಪ ಹಳ್ಳಿಕೇರಿ, ಶೇಖಣ್ಣ ಕಟ್ಟಿಮನಿ, ರಮೇಶ ಹತ್ತಿಕಾಳ, ರವಿ ವಗ್ಗನವರ, ಮಂಜುನಾಥ ಹಳ್ಳೂರಮಠ, ನಾಗರಾಜ ಮದ್ನೂರ, ಸುರೇಶಗೌಡ ಬಸಶೇಟ್ಟಿಯವರ, ಸಂಜೀವ ಕಟವಟೆ, ಜಯಶ್ರೀ ಅಣ್ಣಿಗೇರಿ, ಬೂದಪ್ಪ ಮಾಡಳ್ಳಿ, ಶರಣಪ್ಪ ಬಂಗಾರಿ, ವೆಂಕಟೇಶ ಕೋಣಿ, ಚಂದ್ರಕಾಂತ ಜೈನರ್, ಅಪ್ಪು ನಮಸ್ತೆಮಠ, ಶಂಕರ ಮಲ್ಲಸಮುದ್ರ, ವಿನೋದ ಹಂಸನೂರ ಹಾಗು ಇನ್ನೂ ಹಲವಾರು ಪ್ರಮುಖರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP