ಭೀಮಾ ನದಿ ನೀರು ಹೆಚ್ಚಳ : ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚನೆ
ರಾಯಚೂರು, 23 ಆಗಸ್ಟ್ (ಹಿ.ಸ.) : ಆ್ಯಂಕರ್ : ಭೀಮಾ ನದಿಯು ರಾಯಚೂರು ತಾಲೂಕಿನ ಕಾಡಲೂರು ಗ್ರಾಮದ ಹತ್ತಿರದ ಸಂಗಮದಲ್ಲಿ ಕೃಷ್ಣಾ ನದಿಗೆ ಸೇರಿ ನೀರು ಹೆಚ್ಚಾಗುತ್ತಿದೆ. ಜೊತೆಗೆ ಗುರಜಾಪುರ ಸೇತುವೆ ಮುಳುಗುವ ಹಂತ ಬರಲಿದ್ದು ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜ
ಭೀಮಾ ನದಿ ನೀರು ಹೆಚ್ಚಳ : ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚನೆ


ರಾಯಚೂರು, 23 ಆಗಸ್ಟ್ (ಹಿ.ಸ.) :

ಆ್ಯಂಕರ್ : ಭೀಮಾ ನದಿಯು ರಾಯಚೂರು ತಾಲೂಕಿನ ಕಾಡಲೂರು ಗ್ರಾಮದ ಹತ್ತಿರದ ಸಂಗಮದಲ್ಲಿ ಕೃಷ್ಣಾ ನದಿಗೆ ಸೇರಿ ನೀರು ಹೆಚ್ಚಾಗುತ್ತಿದೆ. ಜೊತೆಗೆ ಗುರಜಾಪುರ ಸೇತುವೆ ಮುಳುಗುವ ಹಂತ ಬರಲಿದ್ದು ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದಲ್ಲಿ ಮಳೆ ಹೆಚ್ಚುತ್ತಿರುವುದರಿಂದ ಭೀಮಾ ನದಿಗೆ ನೀರು ರಭಸವಾಗಿ ಹರಿದು ಬರುತ್ತಿದೆ. ಇದರಿಂದಾಗಿ ಸನ್ನತಿ ಬ್ಯಾರೇಜನಿಂದ ಸುಮಾರು 2,20,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಈಗಾಗಲೇ ಕೃಷ್ಣಾ ನದಿಯ ನಾರಾಯಣಪುರ ಜಲಾಶಯದಿಂದ ಸುಮಾರು 2,10,000 ಕ್ಯೂಸೆಕ್ ನೀರನ್ನು ಸಹ ಹರಿಸಲಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande