ಬಳ್ಳಾರಿ, 23 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಿ. ಗಂಗಮ್ಮ (89) ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದು, ಶನಿವಾರ ಮಧ್ಯಾಹ್ನ 2 ಗಂಟೆಗೆ ಮೃತರ ಅಂತ್ಯಕ್ರಿಯೆಯು ವೀರಶೈವ ರುದ್ರಭೂಮಿಯಲ್ಲಿ ನೆರವೇರಿದೆ.
ಮೃತರಿಗೆ ಹಿರಿಯ ಪತ್ರಕರ್ತ ಬಿ. ಪಂಪನಗೌಡ ಸೇರಿ ಆರು ಜನ ಗಂಡು ಮಕ್ಕಳು, ಒಬ್ಬ ಮಗಳು ಇದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿ ಜನಪ್ರತಿನಿಧಿಗಳು, ಸಂಘಗಳ ಪದಾಧಿಕಾರಿಗಳು, ಗಣ್ಯರು ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು-ಹಿರಿಯರ ಸಮ್ಮುಖದಲ್ಲಿ ನೆರವೇರಿತು.
ಮಾಹಿತಿಗಾಗಿ ಬಿ. ಪಂಪನಗೌಡ, ಮೊಬೈಲ್ ಸಂಖ್ಯೆ : 098866 33682.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್