ಧರ್ಮಸ್ಥಳ ಅಪಪ್ರಚಾರ ಸೂತ್ರಧಾರಿಗಳನ್ನು ಬಂಧಿಸಿ : ಶಾಸಕ ರಾಮಮೂರ್ತಿ
ಬೆಂಗಳೂರು, 23 ಆಗಸ್ಟ್ (ಹಿ.ಸ.) : ಆ್ಯಂಕರ್ : ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಸೂತ್ರಧಾರಿಗಳನ್ನು ಕೂಡಲೇ ಬಂಧಿಸಬೇಕು ಎಂದು ಬೆಂಗಳೂರಿನ ಜಯನಗರ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಆಗ್ರಹಿಸಿದರು. ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಆನೇಕಲ್‌ನಿಂದ 400 ವಾಹನ
ಧರ್ಮಸ್ಥಳ ಅಪಪ್ರಚಾರ ಸೂತ್ರಧಾರಿಗಳನ್ನು ಬಂಧಿಸಿ : ಶಾಸಕ ರಾಮಮೂರ್ತಿ


ಬೆಂಗಳೂರು, 23 ಆಗಸ್ಟ್ (ಹಿ.ಸ.) :

ಆ್ಯಂಕರ್ : ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಸೂತ್ರಧಾರಿಗಳನ್ನು ಕೂಡಲೇ ಬಂಧಿಸಬೇಕು ಎಂದು ಬೆಂಗಳೂರಿನ ಜಯನಗರ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಆಗ್ರಹಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಆನೇಕಲ್‌ನಿಂದ 400 ವಾಹನಗಳಲ್ಲಿ ಭಕ್ತರು ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ಸತೀಶ್ ರೆಡ್ಡಿ ಈಗಾಗಲೇ ತೆರಳಿದ್ದು, ಸೋಮವಾರ ಬೆಳಗ್ಗೆ ಜಯನಗರ ಹಾಗೂ ಬಿಟಿಎಂ ಲೇಔಟ್‌ನಿಂದ 200 ವಾಹನಗಳು ಹೊರಡಲಿವೆ. ಒಟ್ಟು 400 ಕಾರುಗಳಲ್ಲಿ ಸುಮಾರು 2 ಸಾವಿರ ಜನರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು

ತಿಳಿಸಿದರು.

ಆರ್‌.ಎಸ್‌.ಎಸ್ ಮುಖಂಡರು, ಸಂಸದ ತೇಜಸ್ವಿ ಸೂರ್ಯ, ವಿಶ್ವ ಹಿಂದೂ ಪರಿಷತ್ ನಾಯಕರು ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ ಧರ್ಮಸ್ಥಳ ತಲುಪಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಅರ್ಧ ಕಿ.ಮೀ. ಪಾದಯಾತ್ರೆ ನಡೆಸುವ ಯೋಜನೆ ಇದೆ. “ಹಿಂದೂಗಳ ವಿರುದ್ಧ ಧರ್ಮನಿಂದನೆ ನಡೆಯುತ್ತಿದೆ, ಈ ಅಪಪ್ರಚಾರದ ವಿರುದ್ಧ ಸಂಸದರು, ಶಾಸಕರು ಹೋರಾಟ ನಡೆಸಲಿದ್ದಾರೆ” ಎಂದು ರಾಮಮೂರ್ತಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande