ಭಾರತಕ್ಕೆ ಅಮೆರಿಕದ ನೂತನ ರಾಯಭಾರಿ ನೇಮಕ
ವಾಷಿಂಗ್ಟನ್, 23 ಆಗಸ್ಟ್ (ಹಿ.ಸ.) : ಆ್ಯಂಕರ್ : ಭಾರತ–ಅಮೆರಿಕಾ ನಡುವೆ ಸುಂಕ ಸಮರ ತೀವ್ರವಾಗಿರುವ ಹೊತ್ತಿನಲ್ಲಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೆರ್ಗಿಯೊ ಗೋರ್ ಅವರನ್ನು ಭಾರತಕ್ಕೆ ಮುಂದಿನ ಅಮೆರಿಕದ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದಾರೆ. ಶ್ವೇತಭವನದ ಅಧ್ಯಕ್ಷೀಯ ವೈಯಕ್ತಿಕ ಕಚೇ
Ames


ವಾಷಿಂಗ್ಟನ್, 23 ಆಗಸ್ಟ್ (ಹಿ.ಸ.) :

ಆ್ಯಂಕರ್ : ಭಾರತ–ಅಮೆರಿಕಾ ನಡುವೆ ಸುಂಕ ಸಮರ ತೀವ್ರವಾಗಿರುವ ಹೊತ್ತಿನಲ್ಲಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೆರ್ಗಿಯೊ ಗೋರ್ ಅವರನ್ನು ಭಾರತಕ್ಕೆ ಮುಂದಿನ ಅಮೆರಿಕದ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದಾರೆ.

ಶ್ವೇತಭವನದ ಅಧ್ಯಕ್ಷೀಯ ವೈಯಕ್ತಿಕ ಕಚೇರಿಯ ನಿರ್ದೇಶಕರಾಗಿರುವ ಗೋರ್ ಟ್ರಂಪ್ ಅವರ ಆಪ್ತರಲ್ಲಿ ಒಬ್ಬರು.

ಟ್ರಂಪ್ ಅವರು ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್ ಮೂಲಕ ಈ ಘೋಷಣೆ ಮಾಡಿ, “ಸೆರ್ಗಿಯೊ ನಮ್ಮ ‘ಮೇಕ್ ಅಮೆರಿಕ ಗ್ರೇಟ್ ಎಗೇನ್’ ಮಿಷನ್ ಅನ್ನು ಬಲಪಡಿಸುವ ವ್ಯಕ್ತಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸ್ತುತ ಭಾರತದಲ್ಲಿನ ಅಮೆರಿಕ ರಾಯಭಾರಿಯಾಗಿದ್ದ ಎರಿಕ್ ಗಾರ್ಸೆಟ್ಟಿ ಅವರ ಸ್ಥಾನವನ್ನು ಗೋರ್ ವಹಿಸಿಕೊಳ್ಳಲಿದ್ದಾರೆ. ಆದಾಗ್ಯೂ ಅವರ ನೇಮಕಾತಿ ಸೆನೆಟ್ ಅನುಮೋದನೆಗಾಗಿ ಬಾಕಿ ಇದೆ. ಅನುಮೋದನೆ ಸಿಗುವವರೆಗೆ ಗೋರ್ ತಮ್ಮ ಹಾಲಿ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande