ಧಾರವಾಡ, 23 ಆಗಸ್ಟ್ (ಹಿ.ಸ.) :
ಆ್ಯಂಕರ್ : ನವೋದಯ ವಿದ್ಯಾಲಯ ಸಮಿತಿ, ಹೈದರಾಬಾದ್ ವಲಯವು ಪಿ.ಎಂ. ಶ್ರೀ ಸ್ಕೂಲ್ ಜವಾಹರ ನವೋದಯ ವಿದ್ಯಾಲಯಕ್ಕೆ ಕೌನ್ಸಿಲರ್ ಮತ್ತು ವಸತಿ ಗೃಹ ಮೇಲ್ವಿಚಾರಕ (01 ಗಂಡು ಮತ್ತು 01 ಹೆಣ್ಣು) ಹುದ್ದೆಗಳಿಗೆ ಸಂದರ್ಶನ ಏರ್ಪಡಿಸಿದೆ. ಕರ್ನಾಟಕ ರಾಜ್ಯದ ಎಲ್ಲಾ ನವೋದಯ ವಿದ್ಯಾಲಯಗಳಲ್ಲಿ ಈ ಹುದ್ದೆಗಳು ಸಂಪೂರ್ಣವಾಗಿ ಒಪ್ಪಂದ ಆಧಾರದಲ್ಲಿ ಭರ್ತಿ ಮಾಡಲಾಗುವುದು.
ಅರ್ಹ ಅಭ್ಯರ್ಥಿಗಳು ಆಗಸ್ಟ್ 29, 2025 ರಂದು ವಸತಿ ಗೃಹ ಮೇಲ್ವಿಚರಕರ ಹುದ್ದೆಗೆ ಹಾಗೂ ಆಗಸ್ಟ್ 30, 2025 ರಂದು ಕೌನ್ಸಿಲರ್ ಹುದ್ದೆಗೆ ಜವಾಹರ ನವೋದಯ ವಿದ್ಯಾಲಯ, ಧಾರವಾಡದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಬಹುದು.
ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ Hostel Superintendent : https://tinyurl.com/2x3fkzer ಮತ್ತು ಅCounselor: https://tinyurl.com/6retnk9c ಗೆ ಭೇಟಿ ನೀಡಬಹುದು ಎಂದು ಪಿ.ಎಂ. ಶ್ರೀ ಸ್ಕೂಲ್ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa