ಧಾರವಾಡ, 23 ಆಗಸ್ಟ್ (ಹಿ.ಸ.) :
ಆ್ಯಂಕರ್ : ಧಾರವಾಡ ರಂಗಾಯಣಕ್ಕೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ 3 ಜನ ಪುರುಷ ಕಲಾವಿದರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ರಂಗಾಯಣವು ಸಿದ್ಧಪಡಿಸುವ ನಾಟಕಗಳಿಗೆ ಹಾಗೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರಂಗಭೂಮಿಯಲ್ಲಿ ಅನುಭವವಿರುವ ಆಸಕ್ತ ಕಲಾವಿದರು ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ ನಾಟಕ ಶಾಲೆಯ ಪದವಿ, ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ಪದವಿ, ಡಿಪ್ಲೋಮಾ, ರಾಜ್ಯ ಸರ್ಕಾರ ಅಂಗೀಕೃತ ವಿಶ್ವವಿದ್ಯಾಲಯದಿಂದ ನಾಟಕ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
ಅರ್ಹತೆಯುಳ್ಳ 18 ರಿಂದ 25 ವರ್ಷದೊಳಗಿನ ವಯೋಮಿತಿಯುಳ್ಳ ಆಸಕ್ತ ಕಲಾವಿದರನ್ನು ರಂಗಾಯಣದ ನಿಯಮಾನುಸಾರ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದ ಹಾಗೂ ರಂಗಶಿಕ್ಷಣ ಪಡೆದ ಪದವಿ ಕಲಾವಿದರಿಗೆ ವಯೋಮಿತಿಯನ್ನು 5 ವರ್ಷ ಸಡಿಲಿಸಲಾಗುವುದು.
ಆಸಕ್ತರು ರಂಗಾಯಣ ಹಾಗೂ ಫೇಸ್‍ಬುಕ್ ಪೇಜ್‍ನಲ್ಲ್ಲಿ ಅರ್ಜಿ ಪಡೆದು ಅಥವಾ ಬಿಳಿ ಹಾಳೆಯ ಮೇಲೆ ಸ್ವವಿವರದೊಂದಿಗೆ ಆಗಸ್ಟ್ 28, 2025 ರೊಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ ಪಂ.ಬಸವರಾಜ ಬಯಲು ರಂಗಮಂದಿರ, ಕಾಲೇಜು ರಸ್ತೆ, ಧಾರವಾಡ-580001 ಈ ವಿಳಾಸಕ್ಕೆ ಮುದ್ದಾಂ, ಅಂಚೆ ಮೂಲಕ ಅಥವಾ ಇಮೇಲ್ (dharwadrangayana@gmail.com) ಮೂಲಕ ಸಲ್ಲಿಸಬೇಕು. ಆಗಸ್ಟ್ 30, 2025 ರಂದು ಬೆಳಿಗ್ಗೆ 10 ಗಂಟೆಗೆ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಿರಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ, 0836-2441706ಗೆ ಗೆ ಸಂಪರ್ಕಿಸಬಹುದು ಎಂದು ರಂಗಾಯಣದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa